ಶ್ರೀರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ವನಮಹೋತ್ಸವ

ಶೇರ್ ಮಾಡಿ

ರಾಮಕುಂಜ: ಶ್ರೀರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ಎನ್ಎಸ್ಎಸ್ ಘಟಕದ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ವನಮಹೋತ್ಸವ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಎನ್ ಎಸ್ ಎಸ್ ಸ್ವಯಂಸೇವಕರು ಕಾಲೇಜಿನ ಪರಿಸರದಲ್ಲಿ ಗಿಡವನ್ನು ನೆಟ್ಟರು.
ಎನ್ ಎಸ್ ಎಸ್ ಯೋಜನಾಧಿಕಾರಿಗಳಾದ ತಿಲಕಾಕ್ಷ ಇವರು ಮಾತನಾಡುತ್ತಾ “ಮರ-ಗಿಡಗಳು ಇದ್ದರೆ ಸಕಾಲದಲ್ಲಿ ಮಳೆ ಬೆಳೆಗಳು ಸರಿಯಾಗಿ ಆಗುವಂತೆ ನೋಡಿಕೊಳ್ಳುತ್ತವೆ. ಮಣ್ಣು, ಗಾಳಿ ಮತ್ತು ನೀರಿನ ಎಲ್ಲಾ ಸಮಸ್ಯೆಗಳಿಗೆ ಮರಗಳೇ ಪರಿಹಾರವಾಗಿದೆ. ಮರಗಳು ಇವೆಲ್ಲದರ ಪೋಷಣೆಯನ್ನು ಮಾಡುತ್ತವೆ. ಹಾಗಾಗಿ ಈ ದಿನ ಮತ್ತು ಮುಂದಿನ ದಿನಗಳಲ್ಲಿ ಗಿಡಗಳನ್ನ ಬೆಳೆಸುವಂಥದ್ದು, ಮರಗಳನ್ನ ರಕ್ಷಿಸುವಂಥದ್ದು ಅನಿವಾರ್ಯವಾಗಿದೆ. ನಾವು ಈ ದಿಕ್ಕಿನಲ್ಲಿ ಕೆಲಸ ಮಾಡಬೇಕಾಗಿದೆ” ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಚಂದ್ರಶೇಖರ್ ಕೆ ಮಾರ್ಗದರ್ಶನ ಮಾಡಿದರು.

Leave a Reply

error: Content is protected !!