ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ಔಷಧೀಯ ಗಿಡಗಳ ಉದ್ಯಾನವನ ಉದ್ಘಾಟನೆ

ಶೇರ್ ಮಾಡಿ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ಜೂ.5ರಂದು ವನಮಹೋತ್ಸವ ದಿನಾಚರಣೆಯ ಅಂಗವಾಗಿ ಔಷಧೀಯ ಗಿಡಗಳ ಉದ್ಯಾನವನದ ಉದ್ಘಾಟನೆಯನ್ನು ನೆರವೇರಿಸಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ ದಿನೇಶ್ P.T ಇವರು ವಹಿಸಿಕೊಂಡಿದ್ದರು. ಉದ್ಯಾನವನದ ಉದ್ಘಾಟನೆಯನ್ನು ಸಾಮಾಜಿಕ ಕಾರ್ಯಕರ್ತರು ಹಾಗೂ ಆರ್ಯಭಟ ಪ್ರಶಸ್ತಿ ಪುರಸ್ಕೃತರು, ಉದ್ಯಾನವನಕ್ಕೆ ಮಣ್ಣು ಹಾಗೂ ಮರಳನ್ನು ನೀಡಿ ಸಹಕರಿಸಿದ ಡಾ.ರವಿ ಕಕ್ಕೆಪದವು ಇವರು ನೆರವೇರಿಸಿದರು. ಉದ್ಯಾನವನಕ್ಕೆ ಮರಳನ್ನು ನೀಡಿ ಸಹಕರಿಸಿದ ದಿನೇಶ್ ಏನೆಕಲ್ಲು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಉಪಸ್ಥಿತರಿದ್ದರು. ಮಹಾವಿದ್ಯಾಲಯದ ಆಂತರಿಕ ಗುಣಮಟ್ಟ ಕೋಶದ ಸಂಯೋಜಕರಾದ ಡಾ.ಗೋವಿಂದ ಎನ್ ಎಸ್, ಕುಮಾರ್ ಶೇಣಿ, ರೇಂಜರ್ಸ್ ಲೀಡರ್ಸ್ ಆಗಿರುವ ಶ್ರೀಮತಿ ಪ್ರಮೀಳಾ, ಉಪನ್ಯಾಸಕ ವರ್ಗದವರು, ಘಟಕದ ನಾಯಕರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಥಮ ಕಲಾ ಪದವಿಯ ಕಲ್ಪನಾ ಕಾರ್ಯಕ್ರಮವನ್ನು ನಿರೂಪಿಸಿದರು. ರಾಷ್ಟ್ರೀಯ ಸೇವಾ ಯೋಜನೆ ಘಟಕದ ಅಧಿಕಾರಿ ಶ್ರೀಮತಿ ಆರತಿ ಸ್ವಾಗತಿಸಿದರು. ರೋವರ್ಸ್ ಲೀಡರ್ ಆಗಿರುವ ರಾಮ್ ಪ್ರಸಾದ್ ಧನ್ಯವಾದ ಸಮರ್ಪಿಸಿದರು.

Leave a Reply

error: Content is protected !!