ಜೂ.6: ಗೃಹ ಸಚಿವರ ಮಂಗಳೂರು ಪ್ರವಾಸ

ಶೇರ್ ಮಾಡಿ

ಮಂಗಳೂರು: ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಜೂ.6ರಂದು ಮಂಗಳೂರು ಪ್ರವಾಸ ಕೈಗೊಳ್ಳಲಿದ್ದಾರೆ.

ಮಂಗಳವಾರ ಬೆಳಗ್ಗೆ 7:50ಕ್ಕೆ ಬೆಂಗಳೂರಿನಿಂದ ಹೊರಟು 8:35ಕ್ಕೆ ಮಂಗಳೂರು ವಿಮಾನ ನಿಲ್ದಾಣ ತಲುಪಲಿದ್ದಾರೆ. 8:45ಕ್ಕೆ ಸರ್ಕ್ಯೂಟ್ ಹೌಸ್‌ಗೆ ಆಗಮಿಸಲಿದ್ದಾರೆ. 10ಕ್ಕೆ ಪಶ್ಚಿಮ ವಲಯ ಕಚೇರಿಗೆ ಭೇಟಿ ಪ್ರಗತಿ ಪರಿಶೀಲನಾ ಸಭೆ ನಡೆಸುವರು.
ಮಧ್ಯಾಹ್ನ 12ಕ್ಕೆ ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಲಿದ್ದಾರೆ. 12:30ಕ್ಕೆ ಮಂಗಳೂರು ನಗರ ಪೊಲೀಸ್ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸುವರು. 2 ಗಂಟೆಗೆ ಮಂಗಳೂರು ಸರ್ಕ್ಯೂಟ್ ಹೌಸ್‌ ನಿಂದ ಉಡುಪಿಗೆ ತೆರಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Leave a Reply

error: Content is protected !!