ಸುಳ್ಯ: ಶಾಸಕಿ ಭಾಗೀರಥಿ ಮುರುಳ್ಯ ಅವರ ಕಚೇರಿ ಸುಳ್ಯ ತಾಲೂಕು ಪಂಚಾಯತ್ ಕಟ್ಟಡದಲ್ಲಿ ಜೂ.12 ರಂದು ಕಾರ್ಯಾರಂಭಗೊಂಡಿತು.
ತಾಲೂಕು ಪಂಚಾಯತ್ ಕಟ್ಟಡದಲ್ಲಿ ಬೆಳಗ್ಗೆ 6.00 ಗಂಟೆಗೆ ಗಣಹೋಮ ಪೂಜೆ ನಡೆಯಿತು. ಬಳಿಕ 7:00 ಗಂಟೆಗೆ ಪಿ ಕೆ ಉಮೇಶ್ ಅವರು ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಎ ವಿ ತೀರ್ಥರಾಮ, ಎಸ್ ಎನ್ ಮನ್ಮಥ, ಎನ್ ಎ ರಾಮಚಂದ್ರ, ರಾಕೇಶ್ ರೈ ಕೆಡೆಂಜಿ, ವೆಂಕಟ್ ವಳಂಬೆ, ಸುಬೋದ್ ಶೆಟ್ಟಿ, ವಿನಯ್ ಕುಮಾರ್ ಕಂದಡ್ಕ, ಮಹೇಶ್ ರೈ, ಗುರುದತ್ತ್ ನಾಯಕ್, ಧರ್ಮಪಾಲ ರಾವ್, ಲಕ್ಷ್ಮೀನಾರಾಯಣ ರಾವ್, ಬುದ್ಧ ನಾಯ್ಕ್, ಕೃಪಾಶಂಕರ, ಪ್ರದೀಪ್ ರೈ ಮನವಳಿಕೆ, ವಸಂತ ನಡುಬೈಲು, ಶೀಲಾವತಿ ಕುರುಂಜಿ, ಸಂತೋಷ್ ಜಾಕೆ, ಶೈಲೇಶ್ ಅಂಬೆಕಲ್ಲು, ಸುದರ್ಶನ್ ಪಾತಿಕಲ್ಲು, ಅನೂಪ್ ಬಿಳಿಮಲೆ, ಸುನೀಲ್ ಕೇರ್ಪಳ, ಸುಪ್ರೀತ್ ಮೊಂಟಡ್ಕ, ಚಿನ್ನಪ್ಪ ಪೂಜಾರಿ, ಅಶ್ವಿನಿ ಶೈಲೇಶ್, ವಿಜಯ ಆಲಡ್ಕ, ಶ್ಯಾಮ್ ಪಾನತ್ತಿಲ, ಶಿವಪ್ರಸಾದ್, ನವೀನ ಕುದ್ಪಾಜೆ, ವಿಜಯ್ ರೈ, ಚಂದ್ರಶೇಖರ ಅಡ್ಪಂಗಾಯ, ಉಮೇಶ್ ರೈ, ಜನಾರ್ದನ ಕದ್ರ, ಉಪಸ್ಥಿತರಿದ್ದರು.