ವಿದ್ಯಾರ್ಥಿಗಳ ನಡುವೆ ಹೊಡೆದಾಟ; 8 ಮಂದಿ ವಿರುದ್ಧ ಪ್ರಕರಣ ದಾಖಲು

ಶೇರ್ ಮಾಡಿ

ಉಪ್ಪಿನಂಗಡಿ: ಇಲ್ಲಿನ ಬಸ್ ನಿಲ್ದಾಣ ಪರಿಸರದಲ್ಲಿ ವಿದ್ಯಾರ್ಥಿಗಳ ಗುಂಪಿನೊಳಗೆ ವಾಗ್ವಾದ ಬೆಳೆಸಿಕೊಂಡು ಹೊಡೆದಾಟದಲ್ಲಿ ತೊಡಗಿದ್ದ 8 ಮಂದಿ ಕಾಲೇಜು ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕ್ಷುಲ್ಲಕ ಕಾರಣವನ್ನು ಮುಂದಿರಿಸಿ ಬಸ್ ನಿಲ್ದಾಣದಲ್ಲಿ ಸಂಘರ್ಷ ನಿರತ ವಿದ್ಯಾರ್ಥಿಗಳ ಗುಂಪನ್ನು ಕರ್ತವ್ಯದಲ್ಲಿದ್ದ ಪೊಲೀಸರು ಸಮಾಧಾನಿಸಿ ಚದುರಿಸಲು ಯತ್ನಿಸಿದರೂ ಲೆಕ್ಕಿಸದೆ ಹೊಡೆದಾಟದಲ್ಲಿ ತೊಡಗಿದ್ದ ಉಪ್ಪಿನಂಗಡಿ ಸರಕಾರಿ ಕಾಲೇಜಿನ ವಿದ್ಯಾರ್ಥಿಗಳಾದ ಗಿರೀಶ್ (21), ಅಭಿಷಿತ್ (20), ಧನುಷ್ (19), ಮೋಹನ್ (19) ನಂದನ್ (19), ವಿನ್ಯಾಸ್ (18), ರೂಪೇಶ್(20) ಹಿತೇಶ್(19) ಎಂಬವರನ್ನು ವಶಕ್ಕೆ ಪಡೆದು ಅವರ ವಿರುದ್ಧ ಸಾರ್ವಜನಿಕ ಶಾಂತಿಭಂಗದ ಆರೋಪದನ್ವಯ ಪೊಲೀಸ್ ಸಿಬ್ಬಂದಿ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Leave a Reply

error: Content is protected !!