ಕೊಕ್ಕಡ: ಅಸೌಖ್ಯದಿಂದ ಕಾಲೇಜ್ ವಿದ್ಯಾರ್ಥಿನಿ ಮೃತ್ಯು

ಶೇರ್ ಮಾಡಿ

ಕೊಕ್ಕಡ: ವಿದ್ಯಾರ್ಥಿನಿಯೊಬ್ಬಳು ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿರುವಾಗಲೇ ಸಾವನ್ನಪ್ಪಿದ ಘಟನೆ, ಜೂ.12 ರಂದು ಸಂಭವಿಸಿದೆ.

ಕೊಕ್ಕಡ ಗ್ರಾಮದ ಮೀಯಾಳ ನಿವಾಸಿ ನಾಗೇಶ್ ನಳಿಯಾರ್ – ಹೇಮಾವತಿ ದಂಪತಿಗಳ ಪುತ್ರಿ ಶ್ರಾವ್ಯ (17) ಮೃತಪಟ್ಟ ದುರ್ದೈವಿ.
ಉಜಿರೆಯ ಖಾಸಗಿ ಕಾಲೇಜೊಂದರಲ್ಲಿ ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿ
ಶ್ರಾವ್ಯ ಕಳೆದ ಕೆಲವು ದಿನಗಳಿಂದ ಉರಿಮೂತ್ರದ ಸಮಸ್ಯೆಯಿಂದ ಬಳಲುತ್ತಿದ್ದು ಪುತ್ತೂರು ಖಾಸಗಿ ಆಸ್ಪತ್ರೆಯ ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಹತ್ತು ದಿನಗಳ ಹಿಂದೆ ಆಕೆ ಆರೋಗ್ಯದಲ್ಲಿ ತೀರ ಏರುಪೇರು ಉಂಟಾಗಿದ್ದು ಚಿಕಿತ್ಸೆಗಾಗಿ ಪುತ್ತೂರಿನ ವೈದ್ಯರ ಸಲಹೆ ಮೇರೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶ್ರಾವ್ಯ ಸೋಮವಾರ ಮೃತಪಟ್ಟಿದ್ದಾರೆ. ಈ ಬಗ್ಗೆ ಆಕೆಯ ಪೋಷಕರು ಕೂಲಂಕುಶ ವಿವರಗಳಿಗೆ ಉಪ್ಪಿನಂಗಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೃತರು ತಂದೆ, ತಾಯಿ, ಸಹೋದರಿಯನ್ನು ಅಗಲಿದ್ದಾರೆ.

Leave a Reply

error: Content is protected !!