ಸುಬ್ರಹ್ಮಣ್ಯ: ಮಹಿಳಾ ಕಾನೂನು ಮತ್ತು ಭದ್ರತೆ ಕುರಿತು ಉಪನ್ಯಾಸ

ಶೇರ್ ಮಾಡಿ

ಸುಬ್ರಹ್ಮಣ್ಯ: ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಮತ್ತು ಐ ಕ್ಯೂ ಎ ಸಿ ಘಟಕ ಹಾಗೂ ಮಹಿಳಾ ಸಬಲೀಕರಣ ಘಟಕದ ವತಿಯಿಂದ ಮಹಿಳಾ ಕಾನೂನು ಮತ್ತು ಭದ್ರತೆ ಎಂಬ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ದಿನೇಶ.ಪಿ.ಟಿ ಪ್ರಾಂಶುಪಾಲರು ಕೆ ಎಸ್ ಎಸ್ ಕಾಲೇಜು ಸುಬ್ರಹ್ಮಣ್ಯ ಇವರು ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಅನಿಲ್ ಕುಮಾರ್ ವಕೀಲರು ಮಂಗಳೂರು ಇವರು ಮಹಿಳಾ ಕಾನೂನು ಮತ್ತು ಭದ್ರತೆ ಬಗ್ಗೆ ಉಪನ್ಯಾಸವನ್ನು ನೀಡಿದರು. ಮಹಿಳಾ ಘಟಕದ ಸಂಯೋಜಕೀಯಾದ ಶ್ರೀಮತಿ ಸುಮಿತ್ರ ಸ್ವಾಗತಿಸಿದರು. ಮಹಿಳಾ ಸಬಲೀಕರಣ ಘಟಕದ ಸಹ ಸಂಯೋಜಕರಾದ ಶ್ರೀಮತಿ ಪ್ರಮೀಳಾ ಮತ್ತು ಶ್ರೀಮತಿ ರಮ್ಯಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕುಮಾರಿ ಕೀರ್ತನ ವಂದಿಸಿದರು. ಕುಮಾರಿ ಹರ್ಷಿತ ಕಾರ್ಯಕ್ರಮವನ್ನು ನಿರೂಪಿಸಿದರು.

Leave a Reply

error: Content is protected !!