ನೂಜಿಬಾಳ್ತಿಲ,ಇಚಿಲಂಪಾಡಿ ಗ್ರಾಮದಲ್ಲಿ ರಸ್ತೆ ಉದ್ಘಾಟನೆ ಹಾಗೂ ಬಿಜೆಪಿ ಕಾರ್ಯಕರ್ತರಿಗೆ, ಮತದಾರರಿಗೆ ಅಭಿನಂದನಾ ಸಭೆ

ಶೇರ್ ಮಾಡಿ

ಕಡಬ ತಾಲೂಕಿನ ನೂಜಿಬಾಳ್ತಿಲ ಮತ್ತು ಇಚಿಲಂಪಾಡಿ ಗ್ರಾಮದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ರವರು ರಸ್ತೆ ಉದ್ಘಾಟನೆ ಹಾಗೂ ಬಿಜೆಪಿ ಕಾರ್ಯಕರ್ತರಿಗೆ, ಮತದಾರರಿಗೆ ಅಭಿನಂದನಾ ಸಭೆ ಕಾರ್ಯಕ್ರಮ ಭಾಗಿಯಾದರು

ಶಾಸಕರ ಮತ್ತು ಸಂಸದರ ಅನುದಾನದಲ್ಲಿ ಹೊಸದಾಗಿ ನಿರ್ಮಾಣವಾದ ಇಚಿಲಂಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಂಪರ್ಕ ರಸ್ತೆ ಮತ್ತು ನೂಜಿಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲ್ ಹಾಗೂ ಮಾಜಿ ಸಚಿವರಾದ ಎಸ್ ಅಂಗಾರ ಅವರು ಗ್ರಾಮದ ಜನರ ತುರ್ತು ಮನವಿಗೆ ಸ್ಪಂದಿಸಿ ರೂ.25 ಲಕ್ಷ ಅನುದಾನದಲ್ಲಿ ನಿರ್ಮಾಣವಾದ ಒರುಂಬಾಲು ಶ್ರೀ ಉಮಾಮಹೇಶ್ವರ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಬದಿಬಾಗಿಲು -ಒರುಂಬಾಲು ಕಾಂಕ್ರಿಟ್ ರಸ್ತೆ ಹಾಗೂ ಶಾಸಕರ ವಿಶೇಷ ಅನುದಾನದಲ್ಲಿ ನಿರ್ಮಾಣ ಪೂರ್ತಿಯಾದ ನೂಜಿಬಾಳ್ತಿಲ ಗ್ರಾಮದ ಜಾಲು ಮತ್ತು ಶಾಂತಿಯಡ್ಕದಲ್ಲಿ ಗ್ರಾಮದ ಸೇತು ಯೋಜನೆಯಲ್ಲಿ ರೂ.20 ಲಕ್ಷ ದಲ್ಲಿ ನಿರ್ಮಾಣವಾದ ಸೇತುವೆ ಹಾಗೂ ರೂ.15 ಲಕ್ಷ ಅನುದಾನದಲ್ಲಿ ನಡವಳಿಕೆ ರಸ್ತೆ ಮತ್ತು ರೆಂಜಿಲಾಡಿ ಗ್ರಾಮದ ಪೇರಡ್ಕ-ಪೆಲತ್ರಾನದಲ್ಲಿ ರೂ.25 ಲಕ್ಷ ದ ಅನುದಾನದಲ್ಲಿ ನಿರ್ಮಾಣವಾದ ಕಾಂಕ್ರಿಟ್ ರಸ್ತೆ ಗಳನ್ನು ಸುಳ್ಯ ಶಾಸಕರಾದ ಭಾಗೀರಥಿ ಮುರುಳ್ಯ ಅವರು ಉದ್ಘಾಟಿಸಿದರು. ನಂತರ ನೆಲ್ಯಾಡಿ ಶಕ್ತಿ ಕೇಂದ್ರದ ಬಿಜೆಪಿ ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ಅಭಿನಂದನಾ ಕಾರ್ಯಕ್ರಮ ಸಮಾರಂಭದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ರವರು ಭಾಗವಹಿಸಿದರು.
ನೂತನ ಶಾಸಕಿಯಾಗಿ ಆಯ್ಕೆಗೊಂಡ ಭಾಗೀರಥಿ ಮುರುಳ್ಯ ರವರಿಗೆ ಬಿಜೆಪಿ ನೆಲ್ಯಾಡಿ ಶಕ್ತಿಕೇಂದ್ರ ಪರವಾಗಿ ಅಭಿನಂದಿಸಿ ಸನ್ಮಾನಿಸ ಲಾಯಿತು. ನಂತರ ಚುನಾವಣೆ ಸಂದರ್ಭದಲ್ಲಿ ಪಕ್ಷದ ಗೆಲುವಿಗಾಗಿ ಹಗಲಿರುಳು ಶ್ರಮಿಸಿದ ದೇವದುರ್ಲಬ ಕಾರ್ಯಕರ್ತರಿಗೆ ಕೃತಜ್ಞತೆಯನ್ನು ಶಾಸಕಿಯವರು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರು, ಮಹಾಶಕ್ತಿ ಕೇಂದ್ರ ಮತ್ತು ಶಕ್ತಿ ಕೇಂದ್ರದ ಪ್ರಮುಖರು, ಬೂತ್ ಸಮಿತಿ ಸದಸ್ಯರು, ಜನಪ್ರತಿನಿದಿಗಳು, ಸ್ಥಳೀಯರು ಉಪಸ್ಥಿತರಿದ್ದರು
.

Leave a Reply

error: Content is protected !!