ಬಂಟ್ವಾಳ: ಬೆಂಗಳೂರಿಗೆ ಹೋಗುವುದಾಗಿ ಮೆಸೇಜ್ ಮಾಡಿ ತಿಳಿಸಿದ ಯುವತಿಯೋರ್ವಳು ಆ ಬಳಿಕ ಯಾವುದೇ ಸುದ್ದಿಯಿಲ್ಲದೆ ಕಾಣೆಯಾಗಿರುವ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಿ.ಮೂಡ ಕಸ್ಬಾ ಗ್ರಾಮದ ಲೆಕ್ಕಸಿರಿ ಪಾದೆ ನಿವಾಸಿ ರಮೇಶ್ ಸಾಲಿಯಾನ್ ಅವರ ಮಗಳು ನೇಹಾ (22) ಕಾಣೆಯಾದ ಯುವತಿ.
ಮಂಗಳೂರಿನ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಯುವತಿಗೆ ಮನೆಯವರು ಮದುವೆ ಮಾಡುವ ಉದ್ದೇಶದಿಂದ ಸಂಬಂಧ ನೋಡಲು ಮುಂದಾದಾಗ ಮದುವೆ ಸದ್ಯ ನನ್ನ ಒಪ್ಪಿಗೆ ಇಲ್ಲ ಎಂದು ಹೇಳಿದ್ದಲ್ಲದೆ, ನಾನು ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕಾಗಿದೆ ಹೇಳಿದ್ದಳು.
ಆ ಬಳಿಕ ಮೇ.27 ರಂದು ನೇಹ ಎಂದಿನಂತೆ ಮಂಗಳೂರಿಗೆ ಕೆಲಸಕ್ಕೆಂದು ಹೋದವಳು ಅದೇ ದಿನ ಸಂಜೆ 4 ಗಂಟೆಗೆ ನೇಹಾಳ ಚಿಕ್ಕಮ್ಮನ ಮೊಬೈಲ್ ಪೋನ್ ಗೆ ಮೆಸೇಜ್ ಮಾಡಿ ನಾನು ಬೆಂಗಳೂರಿಗೆ ಹೋಗುವುದಾಗಿ ಮೆಸೇಜ್ ಮಾಡಿ ಮೊಬೈಲ್ ಸ್ವಿಚ್ ಆಪ್ ಮಾಡಿದ್ದಳು.
ಮೇ.29 ರಂದು ಮತ್ತು ಜೂನ್ 6 ರಂದು ಒಟ್ಟು ಎರಡು ಪತ್ರ ಮನೆಯವರಿಗೆ ಬಂದಿದ್ದು ಪತ್ರದಲ್ಲಿ ನಾನು ಬೆಂಗಳೂರಿನಲ್ಲಿ ಇರುವುದಾಗಿ ಹಾಗೂ ನನ್ನನ್ನು ಹುಡುಕಬೇಡಿ ಎಂದು ಬರೆದಿದ್ದು, ಆ ಬಳಿಕ ಮೊಬೈಲ್ ಕರೆ ಹಾಗೂ ಯಾವುದೇ ಮೆಸೇಜ್ ಮಾಡಿಲ್ಲ. ಮನೆಯವರ ಜೊತೆ ಯಾವುದೇ ಸಂಪರ್ಕ ಮಾಡಿಲ್ಲ. ಹಾಗಾಗಿ ನೇಹ ಕಾಣೆಯಾಗಿರುವ ಸಂಶಯವಿದ್ದು ಇವಳನ್ನು ಹುಡುಕಿಕೊಡುವಂತೆ ನೇಹ ಎಸ್.ಆರ್ ಅವಳ ತಮ್ಮ ಅವಿನಾಶ್ ಎಸ್.ಆರ್ ಅವರು ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದಾನೆ.