ಸೋಮಂತಡ್ಕ: ಬೆಂಗಳೂರಿನಿಂದ ಮೂಡಬಿದ್ರೆ ಕಡೆ ಬರುತ್ತಿದ್ದ ಆಹಾರ ಉತ್ಪನ್ನಗಳ ಸಾಗಾಟದ ವಾಹನ ಮಂಗಳವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆ ಯ ಸೋಮಂತಡ್ಕ ತಿರುವಿನಲ್ಲಿ ರಸ್ತೆ ಬದಿಯ ಚರಂಡಿಗೆ ಜಾರಿದ ಘಟನೆ ನಡೆದಿದೆ. ಚಾಲಕ ಹಾಗೂ ನಿರ್ವಾಹಕ ಅಪಾಯದಿಂದ ಪಾರಾಗಿದ್ದಾರೆ.
ಇದರಿಂದ ಕೆಲಸ ಸಮಯ ಟ್ರಾಫಿಕ್ ಜಾಮ್ ಉಂಟಾಯಿತು.
ಸ್ಥಳೀಯರಾದ ಗ್ರಾಪಂ ಸದಸ್ಯ ಜಗದೀಶ್ ನಾಯ್ಕ, ಸಚಿನ್ ಭಿಡೆ, ವಿಷ್ಣು ಪ್ರಸಾದ್ ಖಾಡಿಲ್ಕಾರ್, ಭರತ್, ಬಿಪಿನ್ ಜಾರ್ಜ್ ಮತ್ತಿತರರು ಏಕಮುಖ ವಾಹನ ಸಂಚಾರ ವ್ಯವಸ್ಥೆ ಹಾಗೂ ವಾಹನ ಸ್ಥಳಾಂತರಿಸಲು ಸಹಕರಿಸಿದರು.
ಈ ರಸ್ತೆಯಲ್ಲಿ ವಾಹನಗಳು ಅಗಲ ಕಿರಿದಾದ ಹಾಗೂ ತಿರುವುಗಳಿರುವುದರಿಂದ ಮಳೆಗಾಲದ ಆರಂಭವಾದ ನಂತರ ವಾಹನಗಳು ಉರುಳಿ ಬೀಳುವಂತಹ ಘಟನೆಗಳು ಆಗಾಗ ಸಂಭವಿಸುತ್ತಲೇ ಇರುತ್ತದೆ.