ನೆಲ್ಯಾಡಿ: ಜನಜಾಗೃತಿ ವೇದಿಕೆ ಪದಗ್ರಹಣ, ಸತ್ಯನಾರಾಯಣ ಪೂಜೆಯ ಪೂರ್ವಭಾವಿ ಸಭೆ ಹಾಗೂ ಟೆಲಿ ಕಾನೂನಿನ ಬಗ್ಗೆ ಮಾಹಿತಿ

ಶೇರ್ ಮಾಡಿ

ನೆಲ್ಯಾಡಿ:ಕಡಬ ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್(ರಿ), ಜನಜಾಗೃತಿ ವೇದಿಕೆ ಪದಗ್ರಹಣ ಕಾರ್ಯಕ್ರಮ, ಸತ್ಯನಾರಾಯಣ ಪೂಜೆಯ ಬಗ್ಗೆ ಪೂರ್ವಭಾವಿ ಸಭೆ ಹಾಗೂ ಟೆಲಿ ಕಾನೂನಿನ ಬಗ್ಗೆ ಮಾಹಿತಿ ಕಾರ್ಯಕ್ರಮ ಜೂನ್ 14ರಂದು ಕೌಕ್ರಾಡಿ ಹೊಸಮಜಲು ಕಲಿಕಾ ಕೇಂದ್ರದಲ್ಲಿ ನಡೆಯಿತು.

ಜನಜಾಗ್ರತಿ ವೇದಿಕೆಯ ನೆಲ್ಯಾಡಿ ವಲಯದ ಅಧ್ಯಕ್ಷರಾದ ಜಯಾನಂದ ಬಂಟ್ರಿಯಾಲ್ ರವರು ಕಾರ್ಯಕ್ರಮದ ಬಗ್ಗೆ ವಿವರಿಸಿದರು. ಎಲ್ಲರಿಗೂ ಆಮಂತ್ರಣ ಪತ್ರಿಕೆ ನೀಡಿ ಕಾರ್ಯಕ್ರಮಕ್ಕೆ ಬರುವಂತೆ ತಿಳಿಸಿದರು. ನೋಡೆಲ್ ಅಧಿಕಾರಿ ರಕ್ಷಕ್ ರವರು ಟೆಲಿ ಕಾನೂನಿನ ಬಗ್ಗೆ ಮಾಹಿತಿ ನೀಡಿದರು. ವಲಯ ಮೇಲ್ವಿಚಾರಕರಾದ ವಿಜೇಶ್ ಜೈನ್ ಪ್ರಾಸ್ತಾವಿಕ ಮಾತನಾಡಿದರು.

ನೆಲ್ಯಾಡಿ ವಲಯದ ಒಕ್ಕೂಟಗಳ ಅಧ್ಯಕ್ಷರಾದ ಕುಶಾಲಪ್ಪ ಗೌಡ, ಜನಜಾಗೃತಿ ವೇದಿಕೆ ಸದಸ್ಯರಾದ ತುಕಾರಾಮ ರೈ ಹೊಸಮನೆ, ನೆಲ್ಯಾಡಿ ವಲಯದ ಎಲ್ಲ ಒಕ್ಕೂಟಗಳ ಅಧ್ಯಕ್ಷರುಗಳು, ಸೇವಾಪ್ರತಿನಿಧಿಗಳು, ಹಾಗೆಯೇ ಮಾದೇರಿ ಸಾಮಾನ್ಯ ಸೇವಾ ಕೇಂದ್ರದ ಗೀತಾಶ್ರೀ ಉಪಸ್ಥಿತರಿದ್ದರು.
ಸೇವಾಪ್ರತಿನಿಧಿ ನಮಿತಾ ಶೆಟ್ಟಿ ನಿರೂಪಿಸಿ., ಹೇಮಾ.ಜೆ ಸ್ವಾಗತಿಸಿದರು. ವೇದಾ ಪಿ ವಂದಿಸಿದರು.

Leave a Reply

error: Content is protected !!