ಬಿಜೆಪಿ ತಂದ ‘ಮತಾಂತರ ನಿಷೇಧ ಕಾನೂನು’ ರದ್ದುಗೊಳಿಸಲಿರುವ ಕಾಂಗ್ರೆಸ್ ಸರ್ಕಾರ

ಶೇರ್ ಮಾಡಿ

ಬೆಂಗಳೂರು: ಹಿಂದಿನ ಬಿಜೆಪಿ ಸರಕಾರ ತಂದಿದ್ದ ಮತಾಂತರ ವಿರೋಧಿ ಕಾನೂನನ್ನು ರದ್ದುಗೊಳಿಸಲು ಕರ್ನಾಟಕ ಸಚಿವ ಸಂಪುಟ ಗುರುವಾರ ನಿರ್ಧರಿಸಿದೆ. ಜುಲೈ 3 ರಂದು ಆರಂಭವಾಗಲಿರುವ ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಸರಕಾರ ಈ ಸಂಬಂಧ ಮಸೂದೆಯನ್ನು ಮಂಡಿಸಲಿದೆ.

ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ್ “ಮತಾಂತರ ನಿಷೇಧ ಮಸೂದೆ ಕುರಿತು ಸಂಪುಟ ಚರ್ಚೆ ನಡೆಸಿದೆ. 2022ರಲ್ಲಿ ಬಿಜೆಪಿ ಸರಕಾರ ತಂದ ಬದಲಾವಣೆಗಳನ್ನು ರದ್ದುಗೊಳಿಸುವ ಮಸೂದೆಯನ್ನು ನಾವು ಅನುಮೋದಿಸಿದ್ದೇವೆ. ಜುಲೈ 3 ರಿಂದ ಪ್ರಾರಂಭವಾಗುವ ಅಧಿವೇಶನದಲ್ಲಿ ಇದನ್ನು ಮಂಡಿಸಲಾಗುವುದು” ಎಂದು ತಿಳಿಸಿದ್ದಾರೆ.

Leave a Reply

error: Content is protected !!