ಬಿಜೆಪಿ ರಾಜ್ಯಾಧ್ಯಕ್ಷರ ಮನೆಯಲ್ಲಿ ಗೌಪ್ಯವಾಗಿ ನಡೆಯುತ್ತಿದೆ ವಿಶೇಷ ಹವನ; ಫೋಟೋ ವೈರಲ್

ಶೇರ್ ಮಾಡಿ

ಪುತ್ತೂರು: ಬಿಜೆಪಿ ರಾಜ್ಯಾಧ್ಯಕ್ಷರಿಗೆ ಸೇರಿದ ಪುತ್ತೂರು ಸಮೀಪದ ಸವಣೂರಿನ ಮನೆಯಲ್ಲಿ ವಿಶೇಷ ಹವನವೊಂದನ್ನು ಪ್ರಾರಂಭಿಸಲಾಗಿದೆ. ಸುಮಾರು 9 ದಿನಗಳ ಕಾಲ ಈ ವಿಶಿಷ್ಟ ಹವನ ನಡೆಯಲಿದ್ದು, ಜೂ.11ರಂದು ಪ್ರಾರಂಭವಾಗಿದ್ದು, ಜೂ.18ರವರೆಗೆ ನಡೆಯಲಿದೆ.

ಸತತ 9 ದಿನಗಳ ಕಾಲ ನಡೆಯುವ ಈ ಹವನದ ಜವಾಬ್ದಾರಿಯನ್ನು ವಿದ್ವಾನ್ ಬಾಲಕೃಷ್ಣ ಆಚಾರ್ಯ ವಹಿಸಿದ್ದಾರೆ. ಒಳಗೆ ಏನಾಗುತ್ತಿದೆ ಎಂದು ಹೊರಗಿನ ವ್ಯಕ್ತಿಗಳಿಗೆ ಮಾಹಿತಿ ಹೋಗಬಾರದೆಂದು ಜಮೀನಿನ ಮುಖ್ಯ ದ್ವಾರಗಳನ್ನು ಸಂಪೂರ್ಣ ಮುಚ್ಚಿ ಗೌಪ್ಯಯನ್ನು ಕಾಪಾಡಲಾಗಿದೆ.

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಹಿನಾಯ ಸೋಲು ಕಂಡ ಪರಿಣಾಮ ರಾಜ್ಯಾಧ್ಯಕ್ಷ ಪದವಿಯನ್ನು ತ್ಯಜಿಸಬೇಕಾದ ಅನಿವಾರ್ಯತೆಗಳು ಬಂದಿದೆ. ಮುಂದಿನ ಲೋಕಸಭಾಚುನಾವಣೆಯಲ್ಲಿ ಟಿಕೆಟ್ ಕೈತಪ್ಪಿ ಹೋಗುವ ಸಾಧ್ಯತೆಗಳು ಇರುವ ಹಿನ್ನೆಲೆಯಲ್ಲಿ ಮೂಲೆ ಗುಂಪಾಗುವ ಭಯ ಎದುರಾಗಿದೆ ಎನ್ನಲಾಗಿದೆ. ಇದೆಲ್ಲದಕ್ಕೂ ಪರಿಹಾರ ಸಿಗಬೇಕು ಮತ್ತು ಉನ್ನತ ಸ್ಥಾನ ಮಾನ ಸಿಗಬೇಕೆಂಬ ನಿಟ್ಟಿನಲ್ಲಿ ಈ ಹವನ ಕೈಗೊಂಡಿರುವ ಮಾಹಿತಿ ಅಧಿಕೃತ ಮೂಲಗಳಿಂದ ಲಭ್ಯವಾಗಿದೆ.

Leave a Reply

error: Content is protected !!