ಉದನೆ: ಬಿಷಪ್ ಪೋಳಿಕಾರ್ಪೊಸ್ ಪಬ್ಲಿಕ್ ಸ್ಕೂಲ್ ನಲ್ಲಿ ಸಂಸತ್ತು ಚುನಾವಣೆ

ಶೇರ್ ಮಾಡಿ

ಉದನೆ:ಇಲ್ಲಿನ ಬಿಷಪ್ ಪೋಳಿಕಾರ್ಪೊಸ್ ಪಬ್ಲಿಕ್ ಸ್ಕೂಲ್ ಇದರ 2023-24 ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಸಂಸತ್ತು ಚುನಾವಣೆ ನಡೆಯಿತು.

ಪ್ರಜಾಪ್ರಭುತ್ವದಲ್ಲಿ ಮತದಾನದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಯಪಡಿಸುವ ಉದ್ದೇಶದಿಂದ ಅದೇ ಮಾದರಿಯಲ್ಲಿ ಮತದಾನ ಪ್ರಕ್ರಿಯೆ ನಡೆಸಲಾಯಿತು.

ಶಾಲಾ ನಾಯಕಿಯಾಗಿ ಹನಿ, ಉಪನಾಯಕನಾಗಿ ಅಲನ್ ಜಾನ್, ವಿದ್ಯಾಮಂತ್ರಿಯಾಗಿ ಆಗ್ನೆಸ್ ಮೇಹಿ ಜಾರ್ಜ್, ಉಪವಿದ್ಯಾಮಂತ್ರಿಯಾಗಿ ಅಲೀನ, ಗ್ರಂಥಾಲಯ ಮಂತ್ರಿಯಾಗಿ ರೋಷನ್ ಜೋಸೆಫ್, ಉಪ ಗ್ರಂಥಾಲಯ ಮಂತ್ರಿಯಾಗಿ ಜಿಸ್ಮೋಳ್ ಬಿನೋಯ್, ಸಾಂಸ್ಕೃತಿಕ ಮಂತ್ರಿಯಾಗಿ ಸೋನ, ಉಪಮಂತ್ರಿಯಾಗಿ ಸಾಂಜೂ ವರ್ಗೀಸ್, ಕ್ರೀಡಾಮಂತ್ರಿಯಾಗಿ ಜೋಯಲ್ ಎಂ ಪೌಲ್, ಉಪಮಂತ್ರಿಯಾಗಿ ಶೈನಿ ಮ್ಯಾಥ್ಯೂ, ಆರೋಗ್ಯ ಮಂತ್ರಿಯಾಗಿ ಆಲ್ಬಿನ್, ಉಪಮಂತ್ರಿಯಾಗಿ ಧನ್ಯಶ್ರಿ.ಆರ್ ಆಯ್ಕೆಯಾದರು.
ದೈಹಿಕ ಶಿಕ್ಷಕರಾದ ಜಿಮ್ಸನ್ ವರ್ಗೀಸ್ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.

ಸಂಸ್ಥೆಯ ಸಂಚಾಲಕರಾದ ರೆ.ಫಾ ಹನಿ ಜೇಕಬ್ ಹಾಗು ಮುಖ್ಯಗುರು ಸಿಬಿಚನ್ ಟಿ.ಸಿ ಉಪಸ್ಥಿತರಿದ್ದರು. ಶಿಕ್ಷಕ, ಶಿಕ್ಷಕೇತರ ವೃಂದ ಚುನಾವಣಾ ಪ್ರಕ್ರಿಯೆಯಲ್ಲಿ ಸಹಕರಿಸಿದರು.

Leave a Reply

error: Content is protected !!