ನೆಲ್ಯಾಡಿ: ಜ್ಞಾನೋದಯ ಬೆಥನಿ ಪದವಿ ಪೂರ್ವ ಕಾಲೇಜಿನಲ್ಲಿ 2023-24 ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಸಂಸತ್ತು ಚುನಾವಣೆ ನಡೆಯಿತು.
ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಮಹತ್ವವನ್ನು ತಿಳಿಸಲು ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣವನ್ನು ಬೆಳೆಸುವ ಉದ್ದೇಶದಿಂದ ಮತದಾನದ ಮೂಲಕ ಶಾಲಾ ನಾಯಕರನ್ನು ಚುನಾಯಿಸಲಾಯಿತು.
ಶಾಲಾ ನಾಯಕನಾಗಿ ಮಿಲ್ಜಿತ್ ಸೆಕೆಂಡ್ ಪಿಯುಸಿ ಕಾಮರ್ಸ್, ಗೃಹಮಂತ್ರಿಯಾಗಿ ಅಕ್ಷಯ್ ಪ್ರಿನ್ಸ್, ಶಿಕ್ಷಣ ಮಂತ್ರಿಯಾಗಿ ಆಲ್ಬಿನ್ ಬಿನು, ಸಂವಹನ ಮಂತ್ರಿಯಾಗಿ ಜಿಶ್ಮ ಜಾನ್, ಕ್ರೀಡಾ ಮಂತ್ರಿಯಾಗಿ ಶಾರೋನ್ ರೋಯಿ, ಸಾಂಸ್ಕೃತಿಕ ಮಂತ್ರಿಯಾಗಿ ಎಸ್ಎಂ. ಸಾರ್ಥಕ್, ನೀರಾವರಿ ಮಂತ್ರಿಯಾಗಿ ಆಶಿಶ್ ಬಾಸ್, ಪಾರ್ಲಿಮೆಂಟರಿ ಮಂತ್ರಿಯಾಗಿ ಫಾತಿಮತ್ ಫಿದಾ, ಆರೋಗ್ಯ ಮಂತ್ರಿಯಾಗಿ ಅನ್ಸ್ಲೀನ ರವರು ಆಯ್ಕೆಯಾದರು.
ಶಿಕ್ಷಕರು ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.