ಉಡುಪಿ: ಮನ್ನೋಳ್ಳಿ ಗುಜ್ಜಿ ವಾದಿರಾಜ ನಗರದ ಐದನೇ ಮುಖ್ಯರಸ್ತೆಯಲ್ಲಿರುವ ಸ್ಥಳೀಯರಿಂದ ರಸ್ತೆ ಬದಿಯಲ್ಲಿ ಪಾರಿಜಾತ ಗಿಡಗಳನ್ನು ನೆಡುವುದರ ಮುಖಾಂತರ ವನಮಹೋತ್ಸವವನ್ನು ಆಚರಿಸಲಾಯಿತು ۔
ಈ ಪ್ರಯುಕ್ತ ಕಡಿಯಾಳಿ ಕಮಲಬಾಯಿ ಪ್ರೌಢಶಾಲೆಯ ರಿಟೈರ್ಡ್ ಮುಖ್ಯೋಪಾಧ್ಯಾಯ ಸೀತರಾಮ ಮೆಹಂದಲೇ ಇವರಿಂದ ಗಿಡ ನೆಟ್ಟು ತಮ್ಮ ತಮ್ಮ ಮನೆಯ ಎದುರುಗಡೆ ರಸ್ತೆ ಬದಿಯಲ್ಲಿ ಗಿಡಗಳನ್ನು ನೋಡುವುದೇ ಒಂದು ಚೆಂದ ಜೊತೆಯಲ್ಲಿ ಒಳ್ಳೆಯ ಗಾಳಿ ಹಾಗೂ ನೆರಳು ಸಿಗುತ್ತದೆ ಎಂದರು.
ಕೆನರಾ ಬ್ಯಾಂಕಿನ ನಿವೃತ್ತ ಸೀನಿಯರ್ ಮ್ಯಾನೇಜರ್ ಶ್ರೀ ಜನಾರ್ಧನ ಭಟ್ ಗಿಡಕ್ಕೆ ನೀರುಣಿಸಿ ಪ್ರತಿನಿತ್ಯ ಪ್ರತಿಯೊಬ್ಬರು ತಮ್ಮ ತಮ್ಮ ಮನೆಯ ಎದುರುಗಡೆ ಇರುವ ಗಿಡಗಳಿಗೆ ನೀರು ಹಾಕಿ ಪೋಷಣೆ ಮಾಡಿ ಎಂದು ಸಲಹೆ ನೀಡಿದರು ۔ ಪ್ರತಿಯೊಬ್ಬರು ಗಿಡಗಳನ್ನು ನೆಟ್ಟು ಪಾಲನೆ ಮಾಡಿದ್ದಲ್ಲಿ ನಿಜವಾದ ವನಮಹೋತ್ಸವಕ್ಕೆ ಅರ್ಥವನ್ನು ನೀಡುತ್ತದೆ ಎಂದರು ۔ ನಿವೃತ್ತ ಸಿಂಡಿಕೇಟ್ ಬ್ಯಾಂಕ್ ಅಧಿಕಾರಿ ಶ್ರೀ ವೆಂಕಟೇಶ್ ಮೆಹಂದಲೇ , ನಿವೃತ್ತಎಲ್ಐಸಿ ಅಧಿಕಾರಿ ದೇವಣ್ಣ ಪೈ , ಸ್ಟಾರ್ ಹೆಲ್ತ್ ಇನ್ಸೂರೆನ್ಸ್ ನ ಸೀನಿಯರ್ ಮ್ಯಾನೇಜರ್ ಸೇಲ್ಸ್ ಹಾಗೂ ಜೆಸಿಐ ಇಂಡಿಯಾದ ಉಡುಪಿ ಸಿಟಿಯ ಪೂರ್ವ ಅಧ್ಯಕ್ಷ ವಲಯ ಅಧಿಕಾರಿ ಉದಯ ನಾಯ್ಕ್ , ಶ್ರೀಮತಿ ವಿಜಯ ಮೆಹೆಂದಲೇ , ಶ್ರೀಮತಿ ಶುಭ ಮಹೇಂದಲೇ , ಸುಖಾಂತ್, ಆಯುಷ್, ಮುಂತಾದವರು ಉಪಸ್ಥಿತರಿದ್ದರು.