ಕಡಬ ಜೇಸಿಐ ವತಿಯಿಂದ ಪತ್ರಕರ್ತರ ಮಕ್ಕಳಿಗೆ ಶಾಲಾ ಬ್ಯಾಗ್,ಪುಸ್ತಕ,ಕೊಡೆ ವಿತರಣೆ

ಶೇರ್ ಮಾಡಿ

ಕಡಬ : ಕಡಬ ಶ್ರೀಕಂಠ ಸ್ವಾಮಿ ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ಜೇಸಿಐ ಕಡಬ ಕದಂಬ ಇದರ ವತಿಯಿಂದ ಕಡಬ ತಾಲೂಕು ಪತ್ರಕರ್ತರ ಸಂಘದ ಸದಸ್ಯರ ಮಕ್ಕಳಿಗೆ ಶಾಲಾ ಬ್ಯಾಗ್, ಪುಸ್ತಕ ಹಾಗೂ ಕೊಡೆ ವಿತರಣಾ ಕಾರ್ಯಕ್ರಮ ಜೂನ್ 18 ರಂದು ನಡೆಯಿತು.

ದಾನಿ ಹಾಗೂ ಸಾಮಾಜಿ ಮುಂದಾಳ ತಿಲಕ್ ರೈ ಮುಂಡ್ರಾಡಿ ವಿತರಣಾ ಕಾರ್ಯ ನೆರವೇರಿಸಿ ಮಾತನಾಡಿ ಕಡಬ ತಾಲೂಕಿನ ಪತ್ರಕರ್ತರು ಇಲ್ಲಿನ ಸಮಸ್ಯೆಗಳನ್ನು ಕಾಲಕಾಲಕ್ಕೆ ಸಂಬಂಧಪಟ್ಟವರ ಗಮನಕ್ಕೆ ತರುವಂತಹ ವರದಿಗಳನ್ನು ಮಾಡುತ್ತಾ ತಾಲೂಕಿನ ಅಭಿವೃದ್ಧಿಯಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ. ಅವರ ಮಕ್ಕಳಿಗೆ ಪುಸ್ತಕ ,ಕೊಡೆ, ಬ್ಯಾಗ್ ನೀಡುವಲ್ಲಿ ನನ್ನದೊಂದು ಸಣ್ಣ ಕೊಡುಗೆಯಿದೆ. ನಾನು ಈ ಹಿಂದೆ ಕೂಡಾ ಇಂತಹ ಕಾರ್ಯಗಳಿಗೆ ಸಹಕಾರ ನೀಡಿದ್ದೆ ಇನ್ನು ಮುಂದೆಯೂ ನೀಡುತ್ತೇನೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಮತ್ತೋರ್ವ ದಾನಿ ಕಡಬ ಜೆಸಿಐನ ಅಧ್ಯಕ್ಷ ಅಭಿಷೇಕ್ ಜಿ.ಎಂ ಮಾತನಾಡಿ ದೇಶದ ಅಭಿವೃದ್ಧಿಯಲ್ಲಿ ಪತ್ರಕರ್ತರ ಪಾತ್ರ ದೊಡ್ಡದಿದೆ, ಕಡಬ ತಾಲೂಕಿನ ಪತ್ರಕರ್ತರ ಸಮಾಜಮುಖಿ ಚಿಂತನೆ ಹಾಗೂ ಕಾರ್ಯಗಳು ಇತರರಿಗೆ ಮಾದರಿಯಾಗಿದೆ. ತಮ್ಮ ಸಮಸ್ಯೆಗಳನ್ನು ಸಮಾಜಕ್ಕೆ ತೋರ್ಪಡಿಸದೆ ಸಮಾಜದ ಓರೆಕೋರೆಗಳನ್ನು ತಿದ್ದಿ ಸಮಸ್ಯೆಗಳ ನಿವಾರಣೆಗೆ ಸದಾ ಶ್ರಮಿಸುತ್ತಿರುವ ಪತ್ರಕರ್ತರ ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾಗುವ ಪರಿಕರಕರಗಳನ್ನು ವಿತರಿಸಿ ಅವರ ಶೈಕ್ಷಣಿಕ ಬದುಕಿಗೆ ಪ್ರೇರಣೆಯಾಗುವಂತಹ ಕಾರ್ಯವನ್ನು ನಮ್ಮ ಜೇಸೀ ಸಂಸ್ಥೆ ಮಾಡಿದೆ ಎಂದು ಹೇಳಿದರು.

ಜೇಸಿಐ ಪೂರ್ವಾಧ್ಯಕ್ಷರಾದ ಶಿವಪ್ರಸಾದ್ ಮೈಲೇರಿ, ಕೆ.ಎಸ್.ದಿನೇಶ್ ಆಚಾರ್ಯ, ತಿರುಮಲೇಶ್ ಭಟ್ ಹೊಸ್ಮಠ, ಕಡಬ ತಾಲೂಕು ಪತ್ರಕರ್ತರ ಸಂಘದ ಸ್ಥಾಪಕಾಧ್ಯಕ್ಷ ಕೆ.ಎಸ್.ಬಾಲಕೃಷ್ಣ ಕೊಯಿಲ ಸದಸ್ಯರಾದ ಹರೀಶ್ ಬಾರಿಂಜ, ಪ್ರವೀಣ್‌ರಾಜ್ ಕೊಯಿಲ, ಸುಧಾಕರ ಆಚಾರ್ಯ ಕಾಣಿಯೂರು, ಸ್ವಾತಿ ಬಾಳ್ತಿಲ್ಲಾಯ ಕೊಕ್ಕಡ, ಪ್ರಕಾಶ್ ಕೋಡಿಂಬಾಳ, ದಿವಾಕರ ಎಂ ಮತ್ತಿತರರು ಉಪಸ್ಥಿತರಿದ್ದರು.

ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ್ ಎನ್.ಕೆ ಸ್ವಾಗತಿಸಿದರು. ಜೆಸಿಐ ಕಡಬ ಕದಂಬದ ನಿಕಟಪೂರ್ವಾಧ್ಯಕ್ಷ ಕಾಶೀನಾಥ್ ಗೋಗಟೆ ವಂದಿಸಿದರು. ಜಯರಾಮ ಮೂರಾಜೆ ಜೇಸಿವಾಣಿ ವಾಚಿಸಿದರು.

Leave a Reply

error: Content is protected !!