ಅಂಗನವಾಡಿಯನ್ನು ಕಡೆಗಣಿಸಿದರೆ ನೀವು ಉಳಿಯಲಾರರಿ ಸರಕಾರಕ್ಕೆ ಬಿ.ಎಂ. ಭಟ್ ಎಚ್ಚರಿಕೆ.
ನೇಸರ ಜ.11: ಪೂರ್ವ ಶಿಕ್ಷಣ ನೀತಿಯ ಹೆಸರಿನಲ್ಲಿ ಮಹಿಳಾ ಅಭಿವೃದ್ಧಿ ಇಲಾಖೆಯನ್ನು ಕಡೆಗಣಿಸಿ ಅಂದು ದ್ರೌಪತಿಯ ಅವಮಾನಿಸಿ ಕೌರವನ ಸರಕಾರ ನಾಶ,ಸೀತೆಯ ಅವಮಾನಿಸಿ ರಾವಣನ ಸರಕಾರ ನಾಶವಾದಂತೆ ವಿದ್ಯಾ ಸರಸ್ವತಿ ಸೇವೆ ಮಾಡುತ್ತಿರುವ ಅಂಗನವಾಡಿಗಳನ್ನು,ಅದರ ನೌಕರರನ್ನು ಕಡೆಗಣಿಸಿದರೆ ನಿಮ್ಮ ಸರಕಾರ ಉಳಿಯದು ಎಂದು ಕೇಂದ್ರ ಹಾಗೂ ರಾಜ್ಯ ಸರಕಾರಗಳನ್ನು ಎಚ್ಚರಿಸಿದರು.
ಅವರು ಜ.11 ಬೆಳ್ತಂಗಡಿ ತಾಲೂಕು ಅಂಗನವಾಡಿ ನೌಕರರ ಸಂಘದ ನೇತೃತ್ವದಲ್ಲಿ ಕರ್ನಾಟಕ ರಾಜ್ಯದಾದ್ಯಂತ ನಡೆಯುತ್ತಿರುವ ಅಂಗನವಾಡಿ ನೌಕರರ ಹೋರಾಟದ ಅಂಗವಾಗಿ ಬೆಳ್ತಂಗಡಿ ಮಿನಿ ವಿಧಾನಸೌಧದ ಎದುರು ನಡೆದ ಅಂಗನವಾಡಿ ನೌಕರರ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.ಅಂಗನವಾಡಿ ನೌಕರರಿಗೆ ಸೇವಾ ಹಿರಿತನ ವೇತನ ನೀಡಲು ಹಾಗೂ ಅಂಗನವಾಡಿಗಳನ್ನು ಬಲಪಡಿಸಲು 339 ಕೋಟಿ ಹಣ ಹೆಚ್ಚುವರಿ ಬೇಕೆಂದು ಇಲಾಖೆಯ ಶಿಫಾರಸು ಮಾಡಿದ್ದರೂ,ಹಣ ನೀಡದೆ ಮಹಿಳೆಯರಿಗೆ ಅನ್ಯಾಯವಾಗಿದೆ ಅದನ್ನು ತಕ್ಷಣ ಒದಗಿಸಿರಿ ಎಂದರು.ಕೋರೋನಾ ವಾರಿಯರಸ್ ಆಗಿ ಕೋರೋನಾ ವಿರುದ್ಧ ಸಮರ ಸಾರಿದ ನಮಗೆ ಕಳೆದ ನಾಲ್ಕು ವರ್ಷಗಳಿಂದ ವೇತನ ಏರಿಕೆ ಮಾಡಿಲ್ಲ.ಆದರೆ ನೀವು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ನಮ್ಮ ಬದುಕನ್ನ ಕೆಳಗೆ ತಳ್ಳುತ್ತಿದ್ದೀರಿ ಎಂದು ಟೀಕಿಸಿದರು.
ಕೊರೋನಾ ಲಾಕ್ಡೌನ್ ಸಮಯ ಕಾರ್ಮಿಕ ಕಾನೂನುಗಳ ತಿದ್ದುಪಡಿ ಮಾಡಿ ಅಂಗನವಾಡಿಯನ್ನು ಮುಗಿಸಲು ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದೆ. 3 ವರ್ಷದಿಂದ 6 ವರ್ಷದ ಮಕ್ಕಳನ್ನು ಅಂಗನವಾಡಿಯಿಂದ ತಪ್ಪಿಸಿ ಐಸಿಡಿಎಸ್ ಯೋಜನೆಗೆ ಹೊರಟಿದ್ದೀರಿ.ಎಲ್ ಕೆ ಜಿ, ಯು ಕೆ ಜಿ ನಮಗೆ ಕೊಡಿ, ನಮ್ಮ ಯೋಜಿತ ಆರು ಕೆಲಸಗಳ ಹೊರತುಪಡಿಸಿ ಹೆಚ್ಚುವರಿ ಕೆಲಸಗಳಿಂದ ಬಿಡುಗಡೆಗೊಳಿಸಿ ಎಂದು ಸರಕಾರಕ್ಕೆ ಆಗ್ರಹಿಸಿದರು. ಶಾಸಕರು ನೀವು ನಿಮ್ಮನ್ನು ಸಮಾಜ ಸೇವಕರು ಎನ್ನುತ್ತೀರಿ ಹಾಗಿದ್ದಲ್ಲಿ ನಿಮ್ಮ ಮಾಸಿಕ 2 ಲಕ್ಷ ರೂ ಸಂಬಳದ ಕಾಲಂಶ ಸಂಬಳ ನಮಗೆ ಬೇಡವೇ? ಎಂದು ಪ್ರಶ್ನಿಸಿದರು.
ಮಾನವ ಹಕ್ಕುಗಳ ಆಯೋಗದ ಹಾಗೂ ಐ ಎಲ್ ಸಿ ಶಿಫಾರಸ್ಸಿನಂತೆ ನಮಗೂ ಕನಿಷ್ಠ ಮಾಸಿಕ ವೇತನ ರೂ 26000 ನೀಡಬೇಕಿದೆ ಎಂದರು. ಮುಖಂಡರುಗಳಾದ ಸುಮಿತ್ರ, ಅರುಣ,ಕುಸುಮ,ಜಾನಕಿ,ಲೀಲಾವತಿ ಮೊದಲಾದವರು ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷೆ ಗಾಯತ್ರಿ ಸ್ವಾಗತಿಸಿ, ಗೌರವಾಧ್ಯಕ್ಷೆ ದಮಯಂತಿ ವಂದಿಸಿದರು.