40 ಅಡಿ ಆಳದ ಬಾವಿಗೆ ಬಿದ್ದ ಬೆಕ್ಕಿನ ಮರಿ ರಕ್ಷಿಸಿ ಆಪದ್ಭಾಂಧವರಾದ ಪೇಜಾವರ ಶ್ರೀಗಳು

ಶೇರ್ ಮಾಡಿ

ಉಡುಪಿ: 40 ಅಡಿ ಆಳದ ಬಾವಿಗೆ ಬಿದ್ದ ಬೆಕ್ಕಿನ ಮರಿಯೊಂದನ್ನು ರಕ್ಷಿಸಿಕೊಳ್ಳುವಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು ಆಪದ್ಭಾಂಧವರಾಗಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಭಾನುವಾರು ಉಡುಪಿ ಮುಚ್ಚಲಕೋಡು ದೇವಸ್ಥಾನದಲ್ಲಿ ಈ ಸನ್ನಿವೇಶ ನಡೆದಿದ್ದು, ಚೆನ್ನೈ ಮೊಕ್ಕಾಂನಲ್ಲಿದ್ದ ಶ್ರೀಗಳು ದೇವಸ್ಥಾನಕ್ಕೆ ಬಂದಾಗ ಬೆಕ್ಕಿನ ಮರಿ ಬಾವಿಗೆ ಬಿದ್ದ ವಿಷಯ ತಿಳಿಯಿತು.
ತಕ್ಷಣ ಹಗ್ಗಕ್ಕೆ ಬಕೇಟ್ ಕಟ್ಟಿ ಬೆಕ್ಕಿನ ಮರಿ ರಕ್ಷಿಸಲು ಪ್ರಯತ್ನಿಸಲಾದರೂ ಪ್ರಯೋಜವಾಗದೇ ಇದ್ದುದರಿಂದ ಸ್ವತಃ ಪೇಜಾವರ ಶ್ರೀಗಳೇ ಹಗ್ಗದ ಸಹಾಯದಿಂದ ಬಾವಿಗೆ ಇಳಿದು ಬೆಕ್ಕನ್ನು ಮೇಲಕ್ಕೆ ತಂದಿದ್ದಾರೆ.

Leave a Reply

error: Content is protected !!