ಮಂಗಳೂರು: ಕೊಲೆ ಯತ್ನ ಪ್ರಕರಣ; 12 ಗಂಟೆಯೊಳಗೆ ಆರೋಪಿಗಳನ್ನು ಸೆರೆ ಹಿಡಿದ ಪೊಲೀಸರು

ಶೇರ್ ಮಾಡಿ

ಮಂಗಳೂರು: ನಗರದ ಅಲೋಶಿಯಸ್ ಕಾಲೇಜು ಬಳಿ ನಡೆದ ಕೊಲೆ ಯತ್ನ ಘಟನೆಗೆ ಸಂಬಂಧಿಸಿದಂತೆ ನಗರ ಉತ್ತರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ನಾಲ್ವರು ಆರೋಪಿಗಳನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ.

ಬಂಧಿತ ಆರೋಪಿಗಳನ್ನು ಕದ್ರಿ ಮಲ್ಲಿಕಟ್ಟೆ ನಿವಾಸಿ ಮೊಹಮ್ಮದ್ ತುಫೈಲ್ (20), ನೀರು ಮಾರ್ಗ ನಿವಾಸಿ ಮೊಹಮ್ಮದ್ ಅಫ್ರಿದ್ (19), ಮಕ್ಸುದ್ ಸಾಗ್ (21), ಬೋಳಾರ ಮುಳಿಹಿತ್ಲು ನಿವಾಸಿ ಅಬ್ದುಲ್ ಸತ್ತಾರ್ (19) ಬಂಧಿತ ಆರೋಪಿಗಳು.

ಘಟನೆಯ ವಿವರ: ಜೂನ್ 16ರಂದು ರಾತ್ರಿ 9.45ರ ಸಮಯಕ್ಕೆ ಅಲೋಶೀಯಸ್ ಕಾಲೇಜು ಬಳಿ ಕಿನ್ನಿಗೋಳಿ ಏಳಿಂಜೆ ನಿವಾಸಿ ಪ್ರಿಯಾ ಪಿಂಟೋ ಎಂಬಾಕೆಯು ನಿದೀಶ್ ಎಂಬಾತನನ್ನು ಇನ್ಸ್ಟಾಗ್ರಾಮ್ ನಲ್ಲಿ ಸಂಪರ್ಕ ಮಾಡಿ ಮಾತನಾಡಲು ಬರುವಂತೆ ತಿಳಿಸಿದ್ದಾಳೆ. ನಿದೀಶ್ ತನ್ನಿಬ್ಬರು ಸ್ನೇಹಿತರೊಂದಿಗೆ ಸ್ಥಳಕ್ಕೆ ಬಂದಾಗ ಕಾರಿನಲ್ಲಿ ಬಂದ ಪ್ರಿಯಾ ಮತ್ತು ಆಕೆಯ ಜತೆಯಲ್ಲಿದ್ದ ನಾಲ್ವರು ಆರೋಪಿಗಳು ನಿದೀಶ್ ಮತ್ತು ಸ್ನೇಹಿತರ ಜತೆ ಗಲಾಟೆ ಮಾಡಿದ್ದಾರೆ.

ಇದೇ ವೇಳೆ ನಿದೀಶ್ ಎಂಬಾತನಿಗೆ ಹೊಡೆದು, ಚೂರಿಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ. ಅಲ್ಲದೆ, ನಿದೀಶ್ ನ ಎದೆಯ ಎಡಭಾಗಕ್ಕೆ ಚೂರಿಯಿಂದ ಇರಿದು ಹಲ್ಲೆ ಮಾಡಲಾಗಿದೆ. ನಿದೀಶ್ ಸ್ನೇಹಿತರ ಮೇಲೂ ಆರೋಪಿಗಳು ಹಲ್ಲೆ ನಡೆಸಿದ್ದಾರೆ.

ಈ ಬಗ್ಗೆ ನಿದೀಶ್ ಸ್ನೇಹಿತ ನೀಲೆಶ್ ಎಂಬಾತ ಶನಿವಾರ ಮಧ್ಯಾಹ್ನ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ತನಿಖೆ ನಡೆಸಿದ ಪೊಲೀಸರು ಶನಿವಾರ ಸಂಜೆ ಆರು ಗಂಟೆಯ ಸಮಯದಲ್ಲಿ ನಗರದ ಕುಡುಪು ಬೈತುರ್ಲಿ ಬಳಿಯ ಫ್ಲ್ಯಾಟ್ ನಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

Leave a Reply

error: Content is protected !!
%d bloggers like this: