ನೇಸರ ಜ12:ದಿನಾಂಕ 14 -01 -2022 ನೇ ಶುಕ್ರವಾರದಂದು ಮಕರ ಸಂಕ್ರಾಂತಿ ನಿಮಿತ್ತ ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ಕ್ಷೇತ್ರದಲ್ಲಿ ” ವಿಶೇಷ ಪೂಜೆ ” ಹಾಗೂ “ಅನ್ನದಾನ ” ಭಕ್ತರ ಸಹಕಾರದಿಂದ ನಡೆಯಲಿದ್ದು ತಾವು ಸಕುಟುಂಬಿಕರಾಗಿ ಆಗಮಿಸಿ ಗಂಧ- ಪ್ರಸಾದ ಸ್ವೀಕರಿಸಬೇಕಾಗಿ ವಿನಂತಿ.
ದೈವಸ್ಥಾನದಲ್ಲಿ 14 -01 -2022 ನೇ ಶುಕ್ರವಾರದಂದು ನಡೆಯುವ ಸೇವೆಗಳ ವಿವರ
ಸರ್ವ ಸೇವೆ | 250 .00 |
ಹೂವಿನ ಪೂಜೆ | 100 .00 |
ನಾಗತಂಬಿಲ | 200 .00 (ಬೆಳಿಗ್ಗೆ 10 .30 ಕ್ಕೆ 1 ಸೀಯಾಳ 1 ಕುಡ್ತೆ ಹಾಲು 5 ಬಾಳೆ ಎಲೆ ತರಬೇಕು ) |
ಪಂಚಕಜ್ಜಾಯ | 50 .00 |
ಕುಂಕುಮಾರ್ಚನೆ | 20 .00 |
ಹಣ್ಣುಕಾಯಿ | 02 .00 |
ಮಹಾಪೂಜೆ | ಮಧ್ಯಾಹ್ನ ಗಂಟೆ 12 .00 ಕ್ಕೆ |
ಪ್ರಸಾದ ವಿತರಣೆ | ಮಧ್ಯಾಹ್ನ ಗಂಟೆ 12 .30 ಕ್ಕೆ |
ಅನ್ನಸಂತರ್ಪಣೆ | ಮಧ್ಯಾಹ್ನ ಗಂಟೆ 1 .00 ಕ್ಕೆ |
ಸಂಕ್ರಾಂತಿ ರಂಗಪೂಜೆ (ಸಂಕ್ರಾಂತಿ ತಂಡದಿಂದ ) |
ಪ್ರಸಾದ ವಿತರಣೆ | ರಾತ್ರಿ ಗಂಟೆ 07 .30 ಕ್ಕೆ |
ಅನ್ನಸಂತರ್ಪಣೆ | ರಾತ್ರಿ ಗಂಟೆ 08 .00 ಕ್ಕೆ |
ವಿಶೇಷ ಸೂಚನೆ
ಬೆಳಿಗ್ಗೆ 9.00 ಗಂಟೆಗೆ ವಾರ್ಷಿಕ ಲೆಕ್ಕಪತ್ರ ಮಂಡನೆ ಮತ್ತು ವಾರ್ಷಿಕ ಜಾತ್ರಾ ಪ್ರಯುಕ್ತ ಸಮಾಲೋಚನಾ ಸಭೆ ನಡೆಯಲಿರುವುದು .ತಾವೆಲ್ಲರೂ ಆಗಮಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕಾಗಿ ವಿನಂತಿ
ಕ್ಷೇತ್ರ ಪರಿಚಯ
ದಕ್ಷಿಣ ಕನ್ನಡ ಜಿಲ್ಲೆಯ (ತುಳುನಾಡಿನ ) ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ನೂಜಿಬೈಲು
(ಧರ್ಮಸ್ಥಳ -ಪೆರಿಯಶಾಂತಿ -ಮರ್ದಾಳ -ಸುಬ್ರಮಣ್ಯ ರಾಜ್ಯ ರಸ್ತೆಯಲ್ಲಿ ಗೋಳಿಯಡ್ಕದಿಂದ ಮೂರು ಕಿಲೋಮೀಟರು ದೂರ ) ಎಂಬ ಪ್ರಕೃತಿ ದತ್ತವಾದ ಪ್ರದೇಶದಲ್ಲಿ ನೆಲೆಯಾಗಿರುವ ಕಾರ್ಣಿಕ ಕ್ಷೇತ್ರಗಳಲ್ಲಿ ಒಂದು ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ಕ್ಷೇತ್ರ
ನಂಬಿದ ಭಕ್ತರನ್ನು ಕೈಬೀಸಿ ಕರೆದುಕೊಂಡು ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸಿದಲ್ಲಿ ನಂಬಿದ ಭಕ್ತರ ಮನೋಇಷ್ಟಾರ್ಥ ಈಡೇರುತ್ತದೆ .
ಭಕ್ತರ ಇಷ್ಟಾರ್ಥಗಳಾದ ಅರೋಗ್ಯ ,ಸುಖ ದಾಂಪತ್ಯ ಜೀವನ ,ಕಂಕಣ ಭಾಗ್ಯ ,ಸಂತಾನ ವೃದ್ಧಿ ,ಉದ್ಯೋಗ ,ವ್ಯಾಪಾರ ವ್ಯವಹಾರಗಳ ವೃದ್ಧಿಗೆ ಉಳ್ಳಾಲ್ತಿ ಅಮ್ಮನವರನ್ನು ಪ್ರಾರ್ಥಿಸಿದಲ್ಲಿ ಅತೀ ಶೀಘ್ರ ಸಂಕಷ್ಟ್ರ ಪರಿಹಾರವಾಗುತ್ತದೆ .ಶ್ರೀ ಕ್ಷೇತ್ರದ ನಾಗಬನವು ಪ್ರಕೃತಿದತ್ತವಾದ ನಾಗರ ಬೆತ್ತಗಳಿಂದ ಕಂಗೊಳಿಸುತ್ತಿದೆ .ಕ್ಷೇತ್ರದಲ್ಲಿ ಪ್ರತಿ ವರ್ಷದ ಸುಗ್ಗಿ ಹುಣ್ಣಮೆಗೆ ವಾರ್ಷಿಕ ಜಾತ್ರೆ ಸಂಪನ್ನಗೊಳ್ಳುತ್ತದೆ
[foogallery id=”639″]