ವಿವಾಹಿತ ಮಹಿಳೆ ಮಗುವಿನೊಂದಿಗೆ ಎರಡನೇ ಬಾರಿ ನಾಪತ್ತೆ…!!

ಶೇರ್ ಮಾಡಿ

ಬೆಳ್ತಂಗಡಿ: ಗುರುವಾಯನಕೆರೆಯ ಬಾಡಿಗೆ ರೂಂ ನಲ್ಲಿ ವಾಸವಾಗಿದ್ದ ವಿವಾಹಿತೆ ಕವನಾ (25)ತನ್ನ 4 ವರ್ಷದ ಮಗುವಿನೊಂದಿಗೆ ನಾಪತ್ತೆಯಾದ ಘಟನೆ ಜೂ.06ರಂದು ನಡೆದಿದೆ.

ಕಡಬ ತಾಲೂಕು ಬೆಳಂದೂರು ಗ್ರಾಮದ ಕೈಮನೆ ನಿವಾಸಿ ನವೀನ್ ಕೆ ಆರ್ ಹಾಗೂ ಪತ್ನಿ ಕವನಾ ರಾತ್ರಿ 09-30ರ ವೇಳೆಗೆ ಊಟ ಮಾಡಿ ಮಲಗಿದ್ದು, ಬೆಳಗಾಗುವುದರೊಳಗೆ ಮಗುವಿನೊಂದಿಗೆ ಕಾಣೆಯಾಗಿದ್ದಾರೆ.
2022 ನೇ ಇಸವಿಯಲ್ಲಿ ಕೂಡ ಈ ಮಹಿಳೆ ಕಾಣೆಯಾಗಿದ್ದು, ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಆಕೆ ಪರಿಚಯಸ್ಥರೊಂದಿಗೆ ತೆರಳಿರುವ ವಿಷಯ ತಿಳಿದು ಪೊಲೀಸರು ಪತ್ತೆ ಮಾಡಿದ್ದರು. ಇದಾದ ಬಳಿಕವೂ ಆಕೆ ಯಾರೊಂದಿಗೋ ಫೋನಿನಲ್ಲಿ ಹೆಚ್ಚಾಗಿ ಮಾತನಾಡುತ್ತಿದ್ದುದನ್ನು ಪತಿ
ಗಮನಿಸಿದ್ದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಕಾಣೆಯಾದ ಪತ್ನಿ ಹಾಗೂ ಮಗನನ್ನು ಪತ್ತೆ ಮಾಡಿಕೊಡಬೇಕು ಎಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ಪತಿ ನವೀನ್ ಕೆ ಆರ್ ದೂರು ನೀಡಿದ್ದಾರೆ.

Leave a Reply

error: Content is protected !!