ಲಾರಿ ಮತ್ತು ಕಾರುಗಳ ನಡುವೆ ಅಪಘಾತ; ಇಬ್ಬರು ಮಹಿಳೆಯರಿಗೆ ತೀವ್ರ ಗಾಯ

ಶೇರ್ ಮಾಡಿ

ಗುಂಡ್ಯ: ಲಾರಿಯೊಂದು ವಿರುದ್ಧ ದಿಕ್ಕಿನಲ್ಲಿ ಬಂದು ಕಾರಿಗೆ ಬುದ್ದಿದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ತೀವ್ರ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಗುಂಡ್ಯ ಸಮೀಪ ಮಾರ್ಚ್ 22 ರಂದು ಸಂಭವಿಸಿದೆ.

ಗಾಯಗೊಂಡವರನ್ನು ಶಾಂತಾ ದೀಕ್ಷಿತ ಹಾಗೂ ಅವರ ಸೊಸೆ ಅಪರ್ಣಾ ದೀಕ್ಷಿತ್ ಎಂದು ಗುರುತಿಸಲಾಗಿದೆ. ಶಾಂತಾ ದೀಕ್ಷಿತ್ ಅವರ ತಲೆಗೆ ಹಾಗೂ ಅಪರ್ಣ ದೀಕ್ಷಿತ್ ರವರ ಬಲಗೈ ಹಾಗೂ ರಟ್ಟೆಗೆ ತೀವ್ರ ಗಾಯ ಉಂಟಾಗಿದ್ದು ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಮೇಲ್ನೋಟಕ್ಕೆ ಲಾರಿ ಚಾಲಕನು ಅಜಾಗರುಕತೆಯಿಂದ ವಾಹನವನ್ನು ಚಲಾಯಿಸಿಕೊಂಡು ಬಂದದ್ದು ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಶಾಂತಾ ಅವರ ಪತಿ ವಿನಯ ದೀಕ್ಷಿತ್ ನೀಡಿದ ದೂರಿನಂತೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

error: Content is protected !!