ಆಲಂಕಾರು: ಮನೆ ಮಗನ ಸಾವಿನ ಬಳಿಕ ಕಂಗಾಲಾದ ಕುಟುಂಬ ಸಹಾಯದ ನಿರೀಕ್ಷೆಯಲ್ಲಿ, ತಂದೆ, ಗರ್ಭಿಣಿ ಪತ್ನಿ

ಶೇರ್ ಮಾಡಿ

ಕಡಬ: ಮನೆಯ ಆಧಾರಸ್ತಂಭವಾಗಿದ್ದ ಮನೆ ಮಗ ಅಳಿದ ಬಳಿಕ ಆತನ ಕುಟುಂಬ ಕಂಗಾಲಾಗಿದೆ. ಆಲಂಕಾರು ಗ್ರಾಮದ ನಗ್ರಿ ನಿವಾಸಿ ಪದ್ಮಯ್ಯ ಗೌಡರ ಪುತ್ರ ಹರಿಪ್ರಸಾದ್(28) ಎಂಬ ಯುವ ಕಾರ್ಮಿಕ ಇತ್ತೀಚೆಗೆ ಕೆಲಸ ನಿರ್ವಹಿಸುತ್ತಿದ್ದ ವೇಳೆ ಕಟ್ಟಡದಿಂದ ಬಿದ್ದು ಮೃತಪಟ್ಟು ಬಳಿಕ ಈ ಬಡ ಕುಟುಂಬ ಹೈರಾಣಾಗಿದೆ.
ಆರ್ಥಿಕವಾಗಿ ಸಂಕಷ್ಟದಲ್ಲಿರುವ ಈ ಬಡ ಕುಟುಂಬದ ಸಮಸ್ಯೆ ನಿವಾರಿಸುವಲ್ಲಿ ದಾನಿಗಳ ನೆರವಿನ ಅಗತ್ಯವಿದೆ.
ಹರಿಪ್ರಸಾದ್ ಅವರು ಜೂನ್ 2 ರಂದು ನೆಟ್ಟಣ ಸಮೀಪ ಮೇರೊಂಜಿ ಎಂಬಲ್ಲಿ ಕಟ್ಟಡ ಕಾಮಗಾರಿ ನಿರ್ವಹಣೆ ವೇಳೆ ಆಕಸ್ಮಿಕವಾಗಿ ಮಹಡಿಯಿಂದ ಬಿದ್ದು ಮೃತಪಟ್ಟಿದ್ದರು. ಮನೆಗೆ ಆಧಾರಸ್ತಂಭವಾಗಿದ್ದ ಯುವನನ್ನು ಕಳೆದುಕೊಂಡ ಪತ್ನಿ ಈಗ ಮೂರು ತಿಂಗಳ ಗರ್ಭೀಣಿ ಹಾಗೂ ಅನಾರೋಗ್ಯ ಪೀಡಿತ ತಂದೆ ಈಗ ಪರಿತಪಿಸುತ್ತಿದ್ದಾರೆ. ಮನೆಯಲ್ಲಿದ್ದ ದುಡಿಯುವ ವ್ಯಕ್ತಿ ಮೃತಪಟ್ಟ ಬಳಿಕ ಜಿವನೋಪಾಯಕ್ಕೆ ಯಾವುದೇ ಆದಾಯವಿಲ್ಲ ಕುಟುಂಬ ಈಗ ತುತ್ತು ಅನ್ನಕ್ಕೆ ಪರದಾಡುವಂತಾಗಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಸಹೃದಯಿ ನಾಗರೀಕರು, ಕಟ್ಟಡ ಕಾರ್ಮಿಕರು ಮೃತರ ಪತ್ನಿಯ ಹೆಸರಿನಲ್ಲಿರುವ ಕೆನರಾ ಬ್ಯಾಂಕಿನ ಆಲಂಕಾರು ಶಾಖೆಯ ಉಳಿತಾಯ ಖಾತೆಗೆ ಸಹಾಯಧನವನ್ನು ಜಮೆ ಮಡಬೇಕಾಗಿ ಕಟ್ಟಡ ಕಾರ್ಮಿಕರ ಪರವಾಗಿ ಕಾರ್ಮಿಕರ ಸಂಘದ ಆಲಂಕಾರು ವಲಯಾಧ್ಯಕ್ಷ ಜನಾರ್ಧನ ಗೌಡ ಕಯ್ಯಪೆ ವಿನಂತಿ ಮಾಡಿಕೊಂಡಿದ್ದಾರೆ.

ASHWINI, CANARA BANK ALANKAR BRANCH
SAVING BANK A/C NO 110124967776
IFSC .No:CNRB0010204, MICR Code: 575015109,
Foreign Exchange/ Swift Code-CNRBINBBBFD

Leave a Reply

error: Content is protected !!