ಉಪ್ಪಿನಂಗಡಿ: ಜೇಸಿಐ ಚಾರಿಟೇಬಲ್ ಟ್ರಸ್ಟ್ (ರಿ.),ಜೇಸಿಐ ಉಪ್ಪಿನಂಗಡಿ ಘಟಕ, ಕರ್ನಾಟಕ ಪಶುವೈದ್ಯಕೀಯ,ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರ್, ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಆಶ್ರಯದಲ್ಲಿ ನವತೇಜ ಪುತ್ತೂರು ನೇತೃತ್ವದಲ್ಲಿ ಉಪ್ಪಿನಂಗಡಿಯಲ್ಲಿ ಪ್ರಪ್ರಥಮ ಬಾರಿಗೆ “ಹಲಸು ಹಬ್ಬ 2023” ಜುಲೈ 9 ರಂದು ಶ್ರೀ ಗುರು ಸುಧೀಂದ್ರ ಸಭಾಭವನದಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆಯಲಿದೆ.
ಇದರ ಕರಪತ್ರ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ದೇವರಲ್ಲಿ ಪ್ರಾರ್ಥಿಸಿ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪಕ ಸಮಿತಿಯ ಸದಸ್ಯರಾದ ಜಯಂತ ಪೊರೊಳಿ, ಸುನಿಲ್ ಅನುವು, ಉದ್ಯಮಿ ಸುಂದರ ಗೌಡ ಸಚಿನ್, ಜೇಸಿಐ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಜೇಸಿ ಪ್ರಶಾಂತ್ ಕುಮಾರ ರೈ, ಜೇಸಿಐ ಉಪ್ಪಿನಂಗಡಿಯ ಅಧ್ಯಕ್ಷ ಜೇಸಿ ಶೇಖರ್ ಗೌಂಡತ್ತಿಗೆ. ಪೂರ್ವ ಅಧ್ಯಕ್ಷರಾದ ಜೇಸಿ ಹರೀಶ್ ನಟ್ಟಿಬೈಲು ಮತ್ತು ಜೇಸಿ ಕೆ.ವಿ ಕುಲಾಲ್ ಉಪಸ್ಥಿತರಿದ್ದರು.