ನೆಟ್ಟನ : ಸೈಂಟ್ ಮೇರಿಸ್ ಚರ್ಚ್ ನಲ್ಲಿ ಮಣಿಪುರದಲ್ಲಿ ಶಾಂತಿ ನೆಲಸಲು ಪ್ರೆತ್ಯೇಕ ಪ್ರಾರ್ಥನೆ

ಶೇರ್ ಮಾಡಿ

ನೆಟ್ಟನ : ಇಲ್ಲಿನ ಸೈಂಟ್ ಮೇರಿಸ್ ಚರ್ಚ್ ನಲ್ಲಿ ಜೂ.25ರಂದು ಮಣಿಪುರದಲ್ಲಿ ಶಾಂತಿ ನೆಲಸುವ ಸಲುವಾಗಿ ಕಿರಿಯ ಕುಸುಮ ತಂಡದ ಮಕ್ಕಳಿಂದ ಪ್ರಾರ್ಥನೆ ಮತ್ತು ಜಪಮಾಲೆ ರ‍್ಯಾಲಿ ನಡಸಲಾಯಿತ್ತು.

ಕಳೆದ 50 ದಿನಗಳಿಂದ ಮಣಿಪುರದಲ್ಲಿ ಉಂಟಾಗಿರುವ ಗಲಭೆಯಲ್ಲಿ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ ತಮ್ಮ ಗ್ರಾಮಗಳನ್ನು ಬಿಟ್ಟು ಓಡಿ ಹೋಗಿರುವುದು ತುಂಬಾ ಬೇಸರದ ವಿಷಯವಾಗಿದೆ ಎಂದು ಗುತಿಗಾರು ಕಿರಿಯ ಕುಸುಮ ತಂಡದ ಮಕ್ಕಳು ಹೇಳಿದರು ಹಾಗೂ ಶಾಂತಿ ಸ್ಥಾಪನೆ ಮಾಡಬೇಕಾದ ಸರ್ಕಾರ ಮೌನವಾಗಿರುವುದು ಅಪಾಯದ ವಿಷಯವೆಂದು ಅಲ್ಲಿ ಸೇರಿದ ಹಿರಿಯರು ಅಭಿಪ್ರಾಯಪಟ್ಟರು. ನಮ್ಮ ದೇಶ ಶಾಂತಿಯ ನೆಲೆ ಬೀಡಾಗಿದೆ. ಮಣಿಪುರದಲ್ಲಿ ಆದಷ್ಟು ಬೇಗ ಶಾಂತಿ ನೆಲೆಸಲಿ ಎಂಬ ಉದ್ದೇಶದಿಂದ ಮಕ್ಕಳು ಒಟ್ಟು ಸೇರಿ ಪ್ರಾರ್ಥಿಸಿದರು.

ಕಿರಿಯ ಕುಸುಮ ತಂಡದ ಅಧ್ಯಕ್ಷ ಮಾಸ್ಟರ್ ಆಕಾಶ್, ಪ್ರದಾನ ಅಧ್ಯಾಪಕ ಅವಿಜೇಶ್ ಕೆ.ಜೆ ಹಾಗೂ ಅಧ್ಯಾಪಕರು ಮಾರ್ಗದರ್ಶನ ನೀಡಿದರು.

Leave a Reply

error: Content is protected !!