ಬಸ್‌ಗೆ ಅಡ್ಡ ಬಂದ ಕಾಡಾನೆ: ವಿಡಿಯೋ ವೈರಲ್‌

ಶೇರ್ ಮಾಡಿ

ಚಿಕ್ಕಮಗಳೂರು: ಕೆಎಸ್‌ಆರ್‌ಟಿಸಿ ಬಸ್‌ಗೆ ಕಾಡಾನೆಯೊಂದು ಅಡ್ಡ ಬಂದಿದ್ದು, ಬಸ್‌ ನಿಲ್ಲಿಸುತ್ತಿದ್ದಂತೆ ಕಾಡಾನೆ ರಸ್ತೆ ಬದಿಯಲ್ಲಿ ಓಡಿ ಹೋಗಿದೆ. ಬಸ್‌ನಲ್ಲಿದ್ದ ಪ್ರಯಾಣಿಕರು ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಿಕ್ಕಮಗಳೂರು-ಮೂಡಿಗೆರೆ ರಸ್ತೆಯ ಕೊಲ್ಲಿಬೈಲು ಗ್ರಾಮದಲ್ಲಿ ಘಟನೆ ನಡೆದಿದ್ದು, ಕಾಫಿ ಡೇ ಮಾಲೀಕ ದಿ.ಸಿದ್ದಾರ್ಥ ಹೆಗ್ಡೆ ವನದ ಸಮೀಪ ಇದ್ದ ಆನೆ ರಸ್ತೆ ಬದಿಯಲ್ಲಿ ನಡೆದು ಬರುತ್ತಿತ್ತು. ಇದೇ ವೇಳೆ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದ ಬಸ್‌ಗೆ ಎದುರು ಬಂದಿದೆ. ಕಾಡಾನೆ ಪ್ರತ್ಯಕ್ಷವಾಗಿದ್ದರಿಂದ ಬಸ್‌ನಲ್ಲಿದ್ದ ಪ್ರಯಾಣಿಕರು ಗಾಬರಿಗೊಂಡು ಕಿರುಚಾಡಿದ್ದಾರೆ.
ಜನರು ಕಿರುಚಿಕೊಳ್ಳುತ್ತಿದ್ದಂತೆ ಆನೆ ರಸ್ತೆ ಬದಿಯಲ್ಲಿ ಬಸ್‌ ಪಕ್ಕದಲ್ಲೇ ಹಾಯ್ದು ಓಡಿ ಹೋಗಿದೆ. ಬಸ್‌ ಪಕ್ಕದಲ್ಲೇ ಆನೆ ತೆರಳಿದ್ದು, ಬಸ್‌ ಮೇಲೆ ದಾಳಿ ಮಾಡದೆ ಮುಂದೇ ಸಾಗಿದೆ. ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.

Leave a Reply

error: Content is protected !!