ನೂಜಿಬಾಳ್ತಿಲ ಬೆಥನಿ ಪಿಯು ಕಾಲೇಜ್ ನ ಶೈಕ್ಷಣಿಕ ವರ್ಷದ ಚುನಾವಣೆ

ಶೇರ್ ಮಾಡಿ

ನೂಜಿಬಾಳ್ತಿಲ : ಬೆಥನಿ ಪಿಯು ಕಾಲೇಜ್ ನ 2023-24ನೇ ಸಾಲಿನ ಶೈಕ್ಷಣಿಕ ವರ್ಷದ ಚುನಾವಣೆಯು ನಡೆಯಿತು.

ಶಾಲಾ ನಾಯಕಿಯಾಗಿ ದ್ವಿತೀಯ ಪಿಯುಸಿ ಯ ವಿದ್ಯಾರ್ಥಿನಿ ಸೌಪರ್ನಿಕ ಹಾಗೂ ಶಾಲಾ ವಿದ್ಯಾರ್ಥಿ ಪ್ರತಿನಿಧಿಯಾಗಿ ವಂಶಿತಾ.ಎಸ್, ಉಪನಾಯಕಿಯಾಗಿ ಹತ್ತನೇ ತರಗತಿಯ ವಿದ್ಯಾರ್ಥಿನಿ ನಿಶಾ ಜಿ.ಎಸ್ ಹಾಗೂ ಉಪನಾಯಕನಾಗಿ 9ನೇ ತರಗತಿಯ ವಿದ್ಯಾರ್ಥಿ ಬಾಲಕೃಷ್ಣ ಆಯ್ಕೆಯಾಗಿರುತ್ತಾರೆ.
ಮತಗಟ್ಟೆಯಲ್ಲಿ ಚುನಾವಣಾ ಅಧಿಕಾರಿಗಳಾಗಿ ಅಂಕಿತ, ದೀಕ್ಷಾ ವೀಕ್ಷಾ ಹಾಗೂ ಪಿಯುಸಿ ವಿದ್ಯಾರ್ಥಿಗಳಾದ ವಿನಿತ್, ನಿಕ್ಷಿತ್, ಸುದರ್ಶನ್ ಕಾರ್ಯನಿರ್ವಹಿಸಿದರು.
ಶಾಲಾ ಪ್ರಾಂಶುಪಾಲರಾದ ಜಾರ್ಜ್ ಟಿ ಎಸ್,ಮುಖ್ಯ ಗುರುಗಳಾದ ತೋಮಸ್ ಎ.ಕೆ, ಸಹ ಶಿಕ್ಷಕರಾದ ಸುಬ್ರಹ್ಮಣ್ಯ ಎಸ್.ಭಟ್, ಬಿಜು ಕೆ.ಜೆ , ಶಿಲ್ಪ, ಸುಮಿತ ಬಿ.ಟಿ, ಶಾಂಭವಿ ಕೆ, ದಿಲ್ ಷದ್, ಶ್ವೇತಾರಾಣಿ, ಬೀನಾ ಜೋರ್ಜ್, ಜಿನ್ಸಿ ಜೋಸೆಫ್, ಮತ್ತಾಯಿ ಓ.ಜೆ, ಪುನೀತ್ ಕೆ ಚುನಾವಣಾ ಪ್ರಕ್ರಿಯೆ ನಡೆಸಿದರು.

Leave a Reply

error: Content is protected !!