ಬದುಕು ನಿರ್ನಾಮವಾಗಬಾರದು ನಿರ್ಮಾಣವಾಗಬೇಕು – ಸುಕುಮಾರ ಜೈನ್

ಶೇರ್ ಮಾಡಿ

ಉಜಿರೆ: ವಿದ್ಯಾರ್ಥಿಯಾದವನಿಗೆ ಏಕಾಗ್ರತೆಯೊಂದಿಗೆ ಗುರಿ ಹಾಗೂ ಉದ್ದೇಶಗಳು ಇರಬೇಕು. ಶ್ರಮದ ಮಹತ್ವ ಹಾಗೂ ಹಿರಿಯರನ್ನು ಗೌರವಿಸುವುದನ್ನು ಅರಿಯಬೇಕು. ವ್ಯಕ್ತಿತ್ವವನ್ನು ನಾವೇ ಕಟ್ಟಿಕೊಳ್ಳಬೇಕು. ಇತರರಿಗಾಗಿ ಸ್ವಲ್ಪ ಮನಸ್ಸು ಮಿಡಿಯಬೇಕು. ಒಟ್ಟಾರೆ ಬದುಕು ನಿರ್ನಾಮವಾಗದೆ ನಿರ್ಮಾಣ ಆಗಬೇಕು ಎಂದು ಬೆಳ್ತಂಗಡಿಯ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಸುಕುಮಾರ ಜೈನ್ ಹೇಳಿದರು.

ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರಮೋದ್ ಕುಮಾರ್ ಅವರು ಅಧ್ಯಕ್ಷತೆ ವಹಿಸಿ ಯುವ ಶಕ್ತಿಯ ಸದ್ಭಳಕೆ ಬಗ್ಗೆ ಮಾತನಾಡಿದರು.
ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ ಹಾಗೂ ಸಹ ಯೋಜನಾಧಿಕಾರಿ ಪದ್ಮಶ್ರೀ ರಕ್ಷಿತ್ ಉಪಸ್ಥಿತರಿದ್ದರು.

ಭೂಮಿಕಾ ಸ್ವಾಗತಿಸಿ, ಸುದರ್ಶನ ನಾಯಕ್ ಪರಿಚಯಿಸಿದರು. ಪಲ್ಲವಿ ವಂದಿಸಿ, ಸೃಷ್ಠಿ ಎಸ್.ಎಲ್ ನಿರೂಪಿಸಿದರು.

Leave a Reply

error: Content is protected !!