

ನೂಜಿಬಾಳ್ತಿಲ: ಬೆಥನಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಪಾಲಕರ ಸಮಾವೇಶ ಮತ್ತು ರಕ್ಷಕ ಶಿಕ್ಷಕ ಸಂಘದ ಚುನಾವಣಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಸಂಚಾಲಕರಾದ ಫಾದರ್ ವಿಜಯ್ ವರ್ಗಿಸ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಚೇತನ್ ಆನೆಗುಂಡಿ ಉಪನ್ಯಾಸಕರು ಸಂತ ಜಾರ್ಜ್ ಪದವಿ ಪೂರ್ವ ಕಾಲೇಜ ನೆಲ್ಯಾಡಿ ಹಾಗೂ ಸಂಸ್ಥೆಯ ಪ್ರಾಂಶುಪಾಲರಾದ ಜಾರ್ಜ್ ಟಿ.ಎಸ್ ಮತ್ತು ಮುಖ್ಯ ಗುರುಗಳಾದ ಥಾಮಸ್ ಎ ಕೆ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ ಸಂಚಾಲಕರಾದ ಫಾದರ್ ವಿಜಯ್ ವರ್ಗೀಸ್ ಅವರು ಸಂಸ್ಥೆಯ ಶೈಕ್ಷಣಿಕ ಪ್ರಗತಿ ಹಾಗೂ ಪ್ರಸಕ್ತ ವರ್ಷದ ಯೋಜನೆಗಳ ಬಗ್ಗೆ ಪಾಲಕರಿಗೆ ಮಾಹಿತಿ ನೀಡಿದರು. ಮುಖ್ಯ ಅತಿಥಿಯಾಗಿದ್ದ ಚೇತನ್ ಆನೆಗುಂಡಿ ಅವರು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯಲ್ಲಿ ಹೆತ್ತವರ ಜವಾಬ್ದಾರಿಯ ಕುರಿತು ಉಪನ್ಯಾಸ ನೀಡಿದರು. ಕಾಲೇಜಿನ ಪ್ರಾಂಶುಪಾಲರು ಪ್ರಸಕ್ತ ವರ್ಷದ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ತಿಳಿಸಿದರು. ಈ ಸಭೆಯ ನಂತರ ಶಿಕ್ಷಕ ರಕ್ಷಕ ಸಂಘದ ನೂತನ ಪದಾಧಿಕಾರಿ ಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಶ್ರೀಧರ್ ಗೌಡ ಗೋಲ್ತಿಮಾರು, ಉಪಾಧ್ಯಕ್ಷರಾಗಿ ಶ್ರೀಮತಿ ಭಾರತಿ ಪಾಲೆತಡಿ ಹಾಗೂ ಸದಸ್ಯರಾಗಿ ಪದ್ಮಪ್ರಿಯ, ನೆಬಿಸಾ, ಸುರೇಶ್, ಜೋಸೆಫ್, ವಸಂತ, ತಮ್ಮಯ್ಯ ಗೌಡ, ರಮಾದೇವಿ, ಶೋಭಾ, ಸುಶೀಲಾ, ಶೇಖರ ಗೌಡ ಆಯ್ಕೆಯಾದರು. ಮುಖ್ಯ ಗುರುಗಳಾದ ಥಾಮಸ್ ಏ.ಕೆ ಅವರು ಸ್ವಾಗತಿಸಿ, ಶ್ರೀಮತಿ ಜಿನ್ಸಿ ಜೋಸೆಫ್ ವಂದಿಸಿದರು. ಶ್ರೀಮತಿ ಬೀನಾ ಜಾರ್ಜ್ ಕಾರ್ಯಕ್ರಮವನ್ನು ನಿರೂಪಿಸಿದರು.


