ವೀಕೆಂಡ್ ಕರ್ಫ್ಯೂ ಹಾಗೂ ಕೋವಿಡ್ ನಿರ್ಬಂಧಗಳನ್ನು ವಿರೋಧಿಸಿ, ಜನಸಾಮಾನ್ಯರ ಬದುಕನ್ನು ಸಂಕಷ್ಟಕ್ಕೆ ದೂಡಿದ ರಾಜ್ಯ ಸರಕಾರದ ವಿರುದ್ಧ
ನೇಸರ ಜ.12: ಜನರ ತೆರಿಗೆ ಹಣದ ಲೂಟಿಯ ಜೊತೆಗೆ ಜನಸಾಮಾನ್ಯರ ಬದುಕಿನ ಆದಾಯವನ್ನೂ ಲೂಟಿಮಾಡುವುದೇ ಲಾಕ್ ಡೌನ್, ವೀಕೆಂಡ್ ಕರ್ಫೂಗಳ ಹಿಂದಿನ ಗುಟ್ಟು, ಸರಕಾರ ಈ ಆದೇಶವನ್ನು ತಕ್ಷಣ ಹಿಂಒಡೆಯಬೇಕೆಂದು ಮಾಜಿ ಶಾಸಕರು, ಭಾರತ ರಾಷ್ಟ್ರೀಯ ಕಾಂಗ್ರೇಸ್ ನ ಮುಖಂಡರೂ ಆದ ಶ್ರೀ ವಸಂತ ಬಂಗೇರರು ಇಂದು ಹೇಳಿದರು.
ರಾಜ್ಯ ಸರಕಾರ ಅವೈಜ್ಙಾನಿಕವಾಗಿ ಜಾರಿಗೊಳಿಸಿದ ವೀಕೆಂಡ್ ಕರ್ಫೂ ಜನಸಾಮಾನ್ಯರನ್ನು,ಸಣ್ಣ ವ್ಯಾಪರಾಸ್ಥರನ್ನು,ಆಟೋ ಸೇರಿದಂತೆ ಚಾಲಕರನ್ನು ಬಲಿ ಪಡೆಯುತ್ತಿದ್ದು,ತಕ್ಷಣವೇ ಈ ಆದೇಶವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ, ಭಾರತ ರಾಷ್ಟ್ರೀಯ ಕಾಂಗ್ರೇಸ್,ಕಮ್ಯುನಿಸ್ಟ್ ಪಕ್ಷ,ಜೆಡಿಯಸ್,ರಾಜ್ಯ ರೈತ ಸಂಘ,ದಲಿತ ಸಂಘಟನೆಗಳು ಜಂಟಿಯಾಗಿ ಇಂದು ಬೆಳ್ತಂಗಡಿಯ ಮಿನಿ ವಿಧಾನ ಸೌಧದ ಎದುರು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಕಮ್ಯುನಿಸ್ಟ್ ಪಕ್ಷದ ಮುಖಂಡರಾದ ಬಿ.ಯಂ.ಭಟ್ ಮಾತನಾಡಿ, ಆರೆಸ್ಸೆಸ್ ನ ಎರಡನೇ ಸರಸಂಘಚಾಲಕರು ಅಂದು ತಮ್ಮ ಬರಹದಲ್ಲಿ “ಅಧಿಕಾರ ನಿರಂತರ ಉಳಿಯಬೇಕೆಂದರೆ ಜನಸಾಮಾನ್ಯರ ಆರ್ಥಿಕ ಶಕ್ತಿಯನ್ನು ಕುಂದಿಸಬೇಕು” ಎಂದು ಹೇಳಿದ್ದನ್ನೇ ಇಂದಿನ ಬಿಜೆಪಿ ಸರಕಾರಗಳು ಜಾರಿಮಾಡುತ್ತಿವೆ,ಲಾಕ್ ಡೌನ್, ನಿರ್ಬಂಧಕಾಜ್ಙೆಗಳ ಅವಧಿಯಲ್ಲೇ ಜನವಿರೋಧಿ ಮಸೂದೆಗಳನ್ನು ಜಾರಿಗೊಳಿಸುತ್ತಿದ್ದಾರೆ. ಜನರಿಗೆ ಈಗ ಬಿಜೆಪಿ ಸರಕಾರದ ಹುನ್ನಾರ ಅರ್ಥವಾಗುತ್ತಿದ್ದು,ಇದೇ ರೀತಿ ಮುಂದುವರೆದರೆ ಸರಕಾರವನ್ನೇ ಜನ ಕಿತ್ತೆಸೆಯಲಿದ್ದಾರೆ ಎಂದು ಹೇಳಿದರು.
ರೈತಸಂಘದ ಸುರೇಶ್ ಭಟ್ ಮಾತನಾಡಿ ಕೊರೊನ ಎಂಬುದೇ ಒಂದು ಜಾಗತಿಕ ಮಾಫಿಯಾ,ಇದು ವ್ಯವಸ್ಥಿತ ಪಿತೂರಿ ಎಂಬುದು ಈಗಾಗಲೇ ಬಹಿರಂಗಗೊಂಡಿದೆ. ಹೀಗಿರುವಾಗ ಅದರ ತನಿಖೆ ಮಾಡುವುದು ಬಿಟ್ಟು,ಜನರ ಮೇಲೆ ಶಿಕ್ಷೆ ಹೇರುವುದು ಸರಿಯಲ್ಲ ಎಂದರು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಕಾಂಗ್ರೇಸ್ ನಾಯಕರಾದ ಶೈಲೇಶ್ ಕುಮಾರ್, ರಂಜನ್ ಗೌಡ, ಜೆಡಿಯಸ್ ನ ಪ್ರವೀಣ್ ಕುಮಾರ್ ಜೈನ್ ಮೊದಲಾದವರೂ ಮಾತಾಡಿದರು.
ಪ್ರತಿಭಟನೆಯಲ್ಲಿ ಕಾಂಗ್ರೇಸ್, ಕಮ್ಯುನಿಸ್ಟ್, ಜೆಡಿಯಸ್, ರಾಜ್ಯ ರೈತಸಂಘ ಮತ್ತು ದಲಿತ ಸಂಘಟನೆಗಳ ತಾಲೂಕು ಮುಖಂಡರುಗಳು ಭಾಗವಹಿಸಿದ್ದರು. ಬೆಳ್ತಂಗಡಿಯ ಬಸ್ ನಿಲ್ದಾಣದಿಂದ ಮೆರವಣಿಗೆ ಮೂಲಕ ರಾಜ್ಯ ಸರಕಾರದ ಲಾಕ್ ಡೌನ್, ಕರ್ಫೂ ಆದೇಶಗಳಿಗೆ ದಿಕ್ಕಾರ ಕೂಗುತ್ತಾ ಮಿನಿವಿಧಾನಸೌಧದ ಎದುರು ಸೇರಿ ಪ್ರತಿಭಟನೆ ನಡೆಸಲಾಯಿತು.