ಸುಳ್ಯದ ಎನ್ ಎಂ ಸಿ ಗೆ ಅಂತರ್ ಕಾಲೇಜು ಕಬಡ್ಡಿ ಪಂದ್ಯಾಟದಲ್ಲಿ ಪ್ರಶಸ್ತಿ

ಶೇರ್ ಮಾಡಿ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜ್ ಅಂತರ್ ಕಾಲೇಜು ಮಟ್ಟದ ಕಬ್ಬಡಿ ಪಂದ್ಯಾಟದಲ್ಲಿ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಮಂಗಳೂರಿನ ಎಸ್ ಡಿ ಎಂ ಕಾಲೇಜ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್ ಪೋಸ್ಟ್ ಗ್ರಾಜ್ಯುವೇಷನ್ ಸೆಂಟರ್ ಫಾರ್ ಮ್ಯಾನೇಜ್ಮೆಂಟ್ ಸ್ಟಡೀಸ್ ಅಂಡ್ ರಿಸರ್ಚ್ ವತಿಯಿಂದ ಆಯೋಜಿಸಲ್ಪಟ್ಟ ಪ್ರತಿಷ್ಠಿತ ಅಂತರ್ ಕಾಲೇಜ್ ಕಬಡ್ಡಿ ಪಂದ್ಯಾಟ “ಶ್ರೇಷ್ಠ” ದಲ್ಲಿ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜ್ ತಂಡ ಸೆಮಿಫೈನಲ್ ನಲ್ಲಿ ಬಲಿಷ್ಠ ತಂಡವಾದ ಉಡುಪಿಯ ತೆಂಕನಡಿಯೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಸೋಲಿಸಿ ಫೈನಲ್ ಪ್ರವೇಶಿಸಿತ್ತು.
ಫೈನಲ್ ಪಂದ್ಯಾಟದಲ್ಲಿ ಉಜಿರೆಯ ಎಸ್ ಡಿ ಎಂ ಕಾಲೇಜು ತಂಡದೊಂದಿಗೆ ಸಮಬಲದ ಹೋರಾಟ ನಡೆಸಿ ರನ್ನರ್ ಅಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ತಂಡದ ಹೃತಿಕ್ ಸಿ.ಕೆ ಉತ್ತಮ ಆಲ್-ರೌಂಡರ್ ಆಟಗಾರ ಪ್ರಶಸ್ತಿಯನ್ನು ಪಡೆದುಕೊಂಡರು.

Leave a Reply

error: Content is protected !!