ನೆಲ್ಯಾಡಿ: ಸೌಹಾರ್ದತೆಗೆ ಸಾಕ್ಷಿಯಾದ ಪಡುಬೆಟ್ಟಿನ ಯಂ.ಆದಂ

ಶೇರ್ ಮಾಡಿ

ನೆಲ್ಯಾಡಿ: ಕಡಬ ತಾಲೂಕಿನ ನೆಲ್ಯಾಡಿ ಗ್ರಾಮದ ಪಡುಬೆಟ್ಟು ಎಂಬಲ್ಲಿ ಕಳೆದ 30 ವರುಷಗಳಿಂದ ಮೂರು ದಲಿತ ಕುಟುಂಬಗಳು ರಸ್ತೆ ಸಂಪರ್ಕವಿಲ್ಲದೆ ವಂಚಿತರಾಗಿದ್ದರು. ವಿಷಯ ತಿಳಿದ ಪಡುಬೆಟ್ಟಿನ ಯಂ.ಆದಂ ಅವರು ಸ್ವಂತ ಸ್ವಾಧೀನದಲ್ಲಿರುವ ಕೃಷಿ ಭೂಮಿಯನ್ನು ರಸ್ತೆ ನಿರ್ಮಿಸಲು ಮಾನವೀಯತೆ ನೆಲೆಯಿಂದ ಬಿಟ್ಟು ಕೊಟ್ಟರು.

ಈ ಮೂರು ದಲಿತ ಕುಟುಂಬಗಳು 94C ಯಲ್ಲಿ ಹಕ್ಕು ಪತ್ರವನ್ನು ಪಡೆದಿದ್ದು, ಅಕ್ರಮ ಸಕ್ರಮ ಯೋಜನೆಯಾಡಿ ರೆಕಾರ್ಡ್ ಪಡೆದಿರುತ್ತಾರೆ. ಇವರಿಗೆ ಆಶ್ರಯ ಯೋಜನೆಯಾಡಿ ಮನೆ ಮಂಜೂರಾಗಿದ್ದು. ಮನೆ ಕೆಲಸಗಳಿಗೆ ಬೇಕಾದ ಕಲ್ಲು, ಮರಳು, ಸಿಮೆಂಟು ಇತ್ಯಾದಿಗಳನ್ನು ರಸ್ತೆ ಸಂಪರ್ಕ ಇಲ್ಲದೆ ಹೊತ್ತುಸಾಗಿಸುವುದನ್ನು ಕಂಡು ತನ್ನ ಭೂಮಿಯಲ್ಲಿ ರಸ್ತೆ ನಿರ್ಮಿಸಲು ಯಂ.ಆದಂ ಅವರು ಕೃಷಿ ಭೂಮಿಯನ್ನು ನೀಡಿರುತ್ತಾರೆ.
ಈ ಜಾಗದಲ್ಲಿ ರಸ್ತೆ, ಮೋರಿ ನಿರ್ಮಾಣ ಮಾಡಲು ನೆಲ್ಯಾಡಿ ಗ್ರಾಮ ಪಂಚಾಯತ್ ನ ಸದಸ್ಯ ಸಲಾಂ ಬಿಲಾಲ್ ಸಹಕರಿಸಿದರು.

Leave a Reply

error: Content is protected !!