ಪುತ್ತೂರು: ಇಲ್ಲಿನ ವಿಷನ್ ಸಹಾಯನಿಧಿ ಸೇವಾ ಟ್ರಸ್ಟ್‌ನ ಆಶ್ರಯದಲ್ಲಿ ಧನ್ವಂತರಿ ಕ್ಲಿನಿಕಲ್ ಲ್ಯಾಬೊರೇಟರಿ,ಜೆಸಿಐ ಪುತ್ತೂರು,ಲಯನ್ಸ್ ಕ್ಲಬ್ ಪುತ್ತೂರು ಇದರ ಸಹಯೋಗದೊಂದಿಗೆ ನೇತ್ರದಾನ ನೋಂದಣಿ, ಉಚಿತ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ತಪಾಸಣಾ ಶಿಬಿರ ಹಾಗೂ ಊರ ಪರವೂರ ಸಹೃದಯಿ ದಾನಿಗಳ ಸಹಕಾರದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಅಶಕ್ತರಿಗೆ ನಿರಂತರವಾಗಿ ಆಹಾರ ಸಾಮಗ್ರಿಗಳ ಕಿಟ್ ನೀಡುವ 24ನೇ ಯೋಜನೆ ‘ಒಳಿತು ಮಾಡು ಮನುಷ’ ಕಾರ್ಯಕ್ರಮವು ಜೂ.30 ರಂದು ಪುತ್ತೂರಿನ ಸೈನಿಕ ಭವನ ರಸ್ತೆಯಲ್ಲಿರುವ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪುತ್ತೂರಿನ ಶಾಸಕರಾದ ಅಶೋಕ್ ಕುಮಾರ್ ರೈ ಮಾತನಾಡಿ ಖಾಸಗಿ ಆಸ್ಪತ್ರೆ ಗಳಲ್ಲಿ ಡಯಾಲಿಸ್ ಮಾಡುವ ರೋಗಿಗಳ ನೋವನ್ನು ನಾನು ಕಂಡಿದ್ದೇನೆ ಅವರ ಆರ್ಥಿಕ ಪರಿಸ್ಥಿತಿಯನ್ನು ನೋಡಿಕೊಂಡು ದಾನಿಗಳ ಮುಖಾಂತರ ಹಣ ಸಂಗ್ರಹ ಮಾಡಿ ಅದನ್ನು ಕಿಟ್ ಮೂಲಕ ಅಶಕ್ತ ಕುಟುಂಬಗಳಿಗೆ ನೀಡುತ್ತಿದ್ದಾರೆ. ದಾನಿಗಳ ಮುಖಾಂತರ ಸಮಾಜಕ್ಕಾಗಿ ಈ ಕೆಲಸವನ್ನು ಮಾಡುತ್ತಿದ್ದಾರೆ. ಕಷ್ಟದಲ್ಲಿರುವವರ ಕಣ್ಣೀರನ್ನು ಒರೆಸುವ ಕೆಲಸವನ್ನು ಈ ತಂಡ ಮಾಡುತ್ತಿದೆ. ಇವರಿಗೆ ಅಭಿನಂದನೆಯನ್ನು ಹೇಳುತ್ತಿದ್ದೇನೆ. ಇದು ಶ್ರೇಷ್ಟವಾದ ಕೆಲಸ ಇವರಿಗೆ ಸಮಾಜದಲ್ಲಿ ಉತ್ತಮವಾದ ಗೌರವ ಸಿಗಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಕೇಶವ ನಾಯ್ಕ, ಖಜಾಂಚಿ ಮಂಜುನಾಥ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 63,000 ಸಾವಿರ ಮೊತ್ತದ 63 ಆಹಾರ ಕಿಟ್ ವಿತರಣೆ ಮಾಡಲಾಯಿತು. 54 ಜನರಿಗೆ ಬಿಪಿ, ಶುಗರ್ ತಪಾಸಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟಿನ ಅಧ್ಯಕ್ಷರಾದ ಶ್ರೀಮತಿ ಶೋಭಾ ಮಡಿವಾಳ, ಸ್ಥಾಪಕ ಅಧ್ಯಕ್ಷರಾದ ಚೇತನ್ ಕುಮಾರ್, ಸದಸ್ಯರಾದ ಶ್ರೀಮತಿ ಕಾವ್ಯ, ಶ್ರೀಮತಿ ಸರಸ್ವತಿ, ಕುಮಾರಿ ಚಿತ್ರ, ಕುಮಾರಿ ಅತ್ಮಿ, ಕುಮಾರಿ ಸಹನಾ, ಕುಮಾರಿ ಆಶಾ, ಶ್ರೀಮತಿ ಸರಸ್ವತಿ, ಶ್ರೀಮತಿ ವಸಂತಿ, ಅಕ್ಷಯ್ ಕುಲಾಲ್ ಉಪಸ್ಥಿತರಿದ್ದರು.
ಪ್ರಾರ್ಥನೆಯನ್ನು ಗಣ್ಯ, ಸುನೀತಾ, ಸ್ವಾಗತ ಶ್ರೀಮತಿ ಗೀತಾ ಹಾಗೂ ಧನ್ಯವಾದ ವಿಜಯ್ ಕುಮಾರ್ ನೆರವೇರಿಸಿದರು. ಶ್ರೀಮತಿ ಶೃತಿಕ ಹಾಗೂ ಕುಮಾರಿ ಸೌಜನ್ಯ ಕಾರ್ಯಕ್ರಮವನ್ನು ನಿರೂಪಿಸಿದರು.