ಐಬಿಪಿಎಸ್‌ನಿಂದ 4045 ಕ್ಲರ್ಕ್‌ ಹುದ್ದೆಗಳಿಗೆ ಅಧಿಸೂಚನೆ: ಡಿಗ್ರಿ ಅರ್ಹತೆ., ಅರ್ಜಿಗೆ ಲಿಂಕ್‌, ವಿಧಾನ ಇಲ್ಲಿದೆ.

ಶೇರ್ ಮಾಡಿ

ಇನ್‌ಸ್ಟಿಟ್ಯೂಟ್‌ ಆಫ್‌ ಬ್ಯಾಂಕಿಂಗ್ ಪರ್ಸೊನೆಲ್‌ ಸೆಲೆಕ್ಷನ್‌ ದೇಶದಾದ್ಯಂತದ ಹಲವು ಬ್ಯಾಂಕ್‌ಗಳಲ್ಲಿ ಕ್ಲರ್ಕ್‌ ಹುದ್ದೆಗಳನ್ನು ಭರ್ತಿ ಮಾಡಲು ಇದೀಗ ಡೀಟೇಲ್ಡ್‌ ನೋಟಿಫಿಕೇಶನ್‌ ಜತೆಗೆ, ಆನ್‌ಲೈನ್‌ ಅರ್ಜಿಗೆ ಲಿಂಕ್‌ ಬಿಡುಗಡೆ ಮಾಡಿದೆ. ಒಟ್ಟು 4045 ಪೋಸ್ಟ್‌ಗಳಿಗೆ ಅರ್ಜಿ ಆಹ್ವಾನಿಸಿದೆ. ಹುದ್ದೆಗಳ ಕುರಿತು ಹೆಚ್ಚಿನ ಮಾಹಿತಿಗಳನ್ನು ಹಾಗೂ ಅರ್ಜಿ ಸಲ್ಲಿಸುವ ವಿಧಾನವನ್ನು ಈ ಕೆಳಗಿನಂತೆ ತಿಳಿಯಬಹುದಾಗಿದೆ.

ನೇಮಕಾತಿ ಪ್ರಾಧಿಕಾರ : ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆ
ಹುದ್ದೆಗಳ ಹೆಸರು : ಕ್ಲರ್ಕ್‌
ಹುದ್ದೆಗಳ ಸಂಖ್ಯೆ : 4045
ವಿದ್ಯಾರ್ಹತೆ : ಪದವಿ ಉತ್ತೀರ್ಣ.
ವಯಸ್ಸಿನ ಅರ್ಹತೆ : ಕನಿಷ್ಠ 20 ರಿಂದ 28 ವರ್ಷ ವಯೋಮಿತಿಯೊಳಗಿರಬೇಕು.
ಅರ್ಜಿ ಶುಲ್ಕ : ರೂ.850.

ಅರ್ಜಿ ಸಲ್ಲಿಸಲು ಒಬಿಸಿ’ಗೆ-3 ವರ್ಷ, ಎಸ್‌ಸಿ / ಎಸ್‌ಟಿ ಗೆ 5 ವರ್ಷ ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

ಪ್ರಮುಖ ದಿನಾಂಕಗಳು
ಆನ್‌ಲೈನ್‌ ರಿಜಿಸ್ಟ್ರೇಷನ್‌ಗೆ ಆರಂಭಿಕ ದಿನಾಂಕ : 01-07-2023
ಆನ್‌ಲೈನ್‌ ರಿಜಿಸ್ಟ್ರೇಷನ್‌ಗೆ ಕೊನೆ ದಿನಾಂಕ: 21-07-2023
ಅರ್ಜಿ ತಿದ್ದುಪಡಿಗೆ ಅವಕಾಶ : ಜುಲೈ 1 ರಿಂದ 21, 2023 ರವರೆಗೆ.
ಕ್ಲರ್ಕ್‌ ಪ್ರಿಲಿಮ್ಸ್ ಪರೀಕ್ಷೆ ಟ್ರೈನಿಂಗ್‌ಗೆ ಪ್ರವೇಶ ಪತ್ರ ಡೌನ್‌ಲೋಡ್‌ ದಿನಾಂಕ: ಆಗಸ್ಟ್‌ 2023
ಕ್ಲರ್ಕ್ ಪ್ರಿಲಿಮ್ಸ್‌ ತರಬೇತಿ ನಡೆಸುವ ಅವಧಿ : ಆಗಸ್ಟ್‌ 2023
ಪ್ರಿಲಿಮ್ಸ್ ಪರೀಕ್ಷೆ ಪ್ರವೇಶ ಪತ್ರ ಬಿಡುಗಡೆ : ಆಗಸ್ಟ್‌ 2023

ಪ್ರಿಲಿಮ್ಸ್‌ ಪರೀಕ್ಷೆ ದಿನಾಂಕ : ಆಗಸ್ಟ್‌ / ಸೆಪ್ಟೆಂಬರ್ 2023
ಪ್ರಿಲಿಮಿನರಿ ಪರೀಕ್ಷೆ ಫಲಿತಾಂಶ ದಿನಾಂಕ: ಸೆಪ್ಟೆಂಬರ್ / ಅಕ್ಟೋಬರ್ 2023
ಮೇನ್ಸ್‌ ಪರೀಕ್ಷೆ ಪ್ರವೇಶ ಪತ್ರ ಬಿಡುಗಡೆ : ಸೆಪ್ಟೆಂಬರ್ / ಅಕ್ಟೋಬರ್ 2023
ಮೇನ್ಸ್‌ ಪರೀಕ್ಷೆ ದಿನಾಂಕ : ಅಕ್ಟೋಬರ್ 2023
ತಾತ್ಕಾಲಿಕ ಆಯ್ಕೆಪಟ್ಟಿ ಬಿಡುಗಡೆ : ಏಪ್ರಿಲ್ 2023

ಐಬಿಪಿಎಸ್ ಕ್ಲರ್ಕ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ?

  • ಐಬಿಪಿಎಸ್‌ ವೆಬ್‌ಸೈಟ್‌ https://ibps.in/ ಗೆ ಭೇಟಿ ನೀಡಿ.
  • ಓಪನ್ ಆದ ಪೇಜ್‌ನಲ್ಲಿ ‘Apply Online for Common Recruitment Process Under CRP Clerk -XIII – 2023’ ಎಂದಿರುವ ಲಿಂಕ್‌ ಕ್ಲಿಕ್ ಮಾಡಿ.
  • ಅಥವಾ ಅರ್ಜಿಯ ಡೈರೆಕ್ಟ್‌ ಲಿಂಕ್‌ ‘ IBPS Clerk Recruitment 2023 – Apply Online’ ಕ್ಲಿಕ್ ಮಾಡಿ.
  • ನಂತರ ಓಪನ್ ಆಗುವ ವೆಬ್‌ಪುಟದಲ್ಲಿ ‘Click Here For New Registration’ ಎಂದಿರುವಲ್ಲಿ ಕ್ಲಿಕ್ ಮಾಡಿ.
  • ಕೇಳಲಾದ ವೈಯಕ್ತಿಕ ಮಾಹಿತಿಗಳನ್ನು ನೀಡಿ, ಮೊದಲು ರಿಜಿಸ್ಟ್ರೇಷನ್ ಪಡೆಯಿರಿ.
  • ನಂತರ ಮತ್ತೆ ಲಾಗಿನ್‌ ಆಗುವ ಮೂಲಕ ವಿದ್ಯಾರ್ಹತೆ, ಇತರೆ ವಿವರಗಳನ್ನು ನೀಡಿ ಅರ್ಜಿ ಸಲ್ಲಿಸಿ.

ಉದ್ಯೋಗ ವಿವರ
ಹುದ್ದೆಯ ಹೆಸರು ಕ್ಲರ್ಕ್‌ ಕೇಡರ್ ಹುದ್ದೆಗಳ ನೇಮಕ
ವಿವರ ಐಬಿಪಿಎಸ್‌ನಿಂದ ಕ್ಲರ್ಕ್‌ ಕೇಡರ್ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ
ಪ್ರಕಟಣೆ ದಿನಾಂಕ 2023-07-01
ಕೊನೆ ದಿನಾಂಕ 2023-07-21
ಉದ್ಯೋಗ ವಿಧ Full Time
ಉದ್ಯೋಗ ಕ್ಷೇತ್ರ ಬ್ಯಾಂಕ್‌ ವಲಯ
ವೇತನ ವಿವರ INR 20000 to 40000 /Month
ಕೌಶಲ ಮತ್ತು ಶೈಕ್ಷಣಿಕ ಅರ್ಹತೆ

ವಿದ್ಯಾರ್ಹತೆ ಪದವಿ
ಸಂಸ್ಥೆಯ ಹೆಸರು ಐಬಿಪಿಎಸ್
ವೆಬ್‌ಸೈಟ್‌ ವಿಳಾಸ https://www.ibps.in/

Leave a Reply

error: Content is protected !!