ಪರವಾನಿಗೆಯಿಲ್ಲದೇ ಉದ್ಘಾಟನೆಗೊಂಡಿದ್ದ ಬಿಗ್‌ ಬಜಾರಿಗೆ ಬೀಗ ಜಡಿದ ಅಧಿಕಾರಿಗಳು

ಶೇರ್ ಮಾಡಿ

ವಿಟ್ಲ: ವಿಟ್ಲದ ಅಡ್ಡದಬೀದಿ ಜೆಎಂಜೆ ಕಾಂಪ್ಲೆಕ್ಸ್‌ನಲ್ಲಿ ಪರವಾನಿಗೆಯಿಲ್ಲದೇ ಉದ್ಘಾಟನೆಗೊಂಡಿದ್ದ ಬಿಗ್‌ಬಜಾರಿಗೆ ಕೆಲವೇ ಗಂಟೆಯಲ್ಲಿ ಬೀಗ ಜಡಿದ ವಿಟ್ಲ ಪಟ್ಟಣ ಪಂಚಾಯತ್‌ ಮುಖ್ಯಾಧಿಕಾರಿ.

ವಿಟ್ಲದ ಅಡ್ಡದಬೀದಿಯಲ್ಲಿ ಶುಕ್ರವಾರ ಬೆಳಗ್ಗೆ ಬಿಗ್‌ಬಜಾರ್‌ ಶುಭಾರಂಭಗೊಂಡಿತ್ತು. ಸಂಜೆ ವಿಟ್ಲ ಪಟ್ಟಣ ಪಂಚಾಯತ್‌ ಮುಖ್ಯಾಧಿಕಾರಿ ಗೋಪಾಲ ನಾಯ್ಕ ಮತ್ತು ಸಿಬಂದಿ ತೆರಳಿ ಪರಿಶೀಲಿಸಿದಾಗ ವ್ಯಾಪಾರ ನಡೆಸಲು ಪ.ಪಂ.ನಿಂದ ಯಾವುದೇ ಅನುಮತಿ ಪಡೆಯದಿರುವುದು ಗಮನಕ್ಕೆ ಬಂದಿದೆ.
ಬಳಿಕ ಅಧಿಕಾರಿಗಳು ಅಂಗಡಿಗೆ ಬೀಗ ಜಡಿದಿದ್ದಾರೆ. ಬಿಗ್‌ಬಜಾರ್‌ನ ಪ್ರಚಾರದ ಬ್ಯಾನರನ್ನು ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ಗೆ ಅಳವಡಿಸಿದ್ದು, ಇದು ಕಾನೂನು ಬಾಹಿರವಾಗಿದ್ದು, ಅದನ್ನು ಕೂಡ ಅಧಿಕಾರಿಗಳು ತೆರವುಗೊಳಿಸಿದ್ದಾರೆ.

Leave a Reply

error: Content is protected !!