ಖಾಸಗಿ ಬಸ್ – ಟಿಪ್ಪರ್ ಡಿಕ್ಕಿ; ಬಸ್ ಚಾಲಕನಿಗೆ ಗಾಯ

ಶೇರ್ ಮಾಡಿ

ಕಾರ್ಕಳ: ಖಾಸಗಿ ಬಸ್ಸ್ ಗೆ ಟಿಪ್ಪರ್ ಡಿಕ್ಕಿಯಾದ ಘಟನೆ ಕಾರ್ಕಳದಲ್ಲಿ ನಡೆದಿದೆ. ಕಾರ್ಕಳದ ಪುಲ್ಕೇರಿ ಬೈಪಾಸ್ ನಲ್ಲಿ ಅಪಘಾತ ಸಂಭವಿಸಿದ್ದು, ಕಾರ್ಕಳದಿಂದ ಧರ್ಮಸ್ಥಳಕ್ಕೆ ಹೋಗುವ ಬಸ್ ಗೆ ಎದುರಿನಿಂದ ಬಂದ ಟಿಪ್ಪರ್ ಡಿಕ್ಕಿಯಾಗಿದ್ದು. ಬಸ್ ಚಾಲಕ ನಿಟ್ಟೆ ಗ್ರಾಮದ ಹರೀಶ್ ಎಂಬವರಿಗೆ ಗಾಯವಾಗಿದೆ.

ಘಟನೆಯಲ್ಲಿ ಕೆಲವು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಡಿಕ್ಕಿಯ ರಭಸಕ್ಕೆ ಬಸ್ಸಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಟಿಪ್ಪರ್ ಗೆ ಯಾವುದೇ ರೀತಿಯ ಹಾನಿ ಸಂಭವಿಸಿಲ್ಲ.
ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Leave a Reply

error: Content is protected !!