ಬೆಂಗಳೂರು: ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾದ ಅನ್ನ ಭಾಗ್ಯ ಯೋಜನೆಗೆ ಜು. 10ರಂದು ಮರು ಚಾಲನೆ ಸಿಗಲಿದ್ದು, ಸೋಮವಾರ ಸಂಜೆ 5 ಗಂಟೆಗೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫಲಾನುಭವಿಗಳ ಖಾತೆಗೆ ನೇರ ಹಣ ಜಮೆ ಮಾಡಲಿದ್ದಾರೆ.
ಪ್ರತೀ ಕೆ.ಜಿ. ಅಕ್ಕಿಗೆ 34 ರೂ.ಗಳಂತೆ ತಲಾ 5 ಕೆ.ಜಿ. ಅಕ್ಕಿಯ ಬದಲು 170 ರೂ. ಜಮೆಯಾಗಲಿದೆ. ಜುಲೈ ತಿಂಗಳ ಪಡಿತರ ಪಡೆದವರಿಗೆ ಮಾತ್ರ ಈ ಮೊತ್ತ ಸಿಗಲಿದ್ದು, 1.28 ಕೋಟಿ ಕುಟುಂಬಗಳ 4.40 ಕೋಟಿ ಫಲಾನುವಿಗಳಿಗೆ ಪ್ರಯೋಜನ ಆಗಲಿದೆ. ಇದಕ್ಕಾಗಿ ಅಂದಾಜು 800 ಕೋಟಿ ರೂ. ಬೇಕಿದ್ದು, ಆಧಾರ್ ಹಾಗೂ ಬ್ಯಾಂಕ್ ಖಾತೆ ಜೋಡಣೆ ಮಾಡಿಕೊಳ್ಳಲು ಫಲಾನುಭವಿಗಳಿಗೆ ಸರಕಾರ ಸಮಯಾವಕಾಶ ನೀಡಲಿದೆ.