ಭಕ್ತರ ದು:ಖದ ಮಡುವಿನಲ್ಲಿ ಹಿರೇಕೋಡಿ ಜೈನ ಮುನಿ ಮಹಾರಾಜರ ಅಂತ್ಯ ಸಂಸ್ಕಾರ

ಶೇರ್ ಮಾಡಿ

ಚಿಕ್ಕೋಡಿ: ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿ ಪರ್ವತ ಆಶ್ರಮದ ಕಾಮಕುಮಾರ ನಂದಿ ಮಹಾರಾಜರು ಕಳೆದ ಎರಡು ದಿನಗಳ ಹಿಂದೆ ಕಿರಾತಕರಿಂದ ಹತ್ಯೆಗೊಳಗಾಗಿದ್ದರು.

ಪಾರ್ಥಿವ ಶರೀರ ಮರಣ್ಣೋತ್ತರ ಪರೀಕ್ಷೆಗೆ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಹೋಗಿತ್ತು. ಅಲ್ಲಿಂದ ನೇರವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ನಡುವೆ ಹಿರೇಕೋಡಿ ನಂದಿ ಪರ್ವತ ಆಶ್ರಮಕ್ಕೆ ಆಗಮಿಸಿ ಆಶ್ರಮದ ಬದಿಯ ಕೃಷಿ ಜಮೀನಿನಲ್ಲಿ ಅಂತ್ಯ ಸಂಸ್ಕಾರ ನಡೆಯಿತು.
ಜೈನ ಧರ್ಮದ ಸಂಪ್ರದಾಯದಂತೆ ಮುನಿ ಮಹಾರಾಜರ ಸಹೋಧರನ ಮಗ ಭೀಮಗೌಂಡ ಉಗಾರೆ ಮುನಿಗಳಿಗೆ ಅಗ್ನಿ ಸ್ಪರ್ಶ ನೀಡಿದರು.

ಅಂತ್ಯಕ್ರಿಯೆಯಲ್ಲಿ ನಾಂದಣಿಯ ಜೀನಸೇನ ಭಟ್ಟಾರಕ ಸ್ವಾಮೀಜಿ. ಕೊಲ್ಲಾಪೂರದ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ. ವರೂರದ ಧರ್ಮಸೇನ ಭಟ್ಟಾರಕ ಸ್ವಾಮೀಜಿ.ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ,ಶಾಸಕ ಗಣೇಶ ಹುಕ್ಕೇರಿ, ಧುರೀಣ ಉತ್ತಮ ಪಾಟೀಲ,ಬಿಜೆಪಿ ಜಿಲ್ಲಾಧ್ಯಕ್ಷ ಡಾ.ರಾಜೇಶ ನೇರ್ಲಿ, ಪ್ರಧಾನ ಕಾರ್ಯದರ್ಶಿ ಸತೀಶ ಅಪ್ಪಾಜಿಗೊಳ, ವೀಣಾ ಪಟ್ಟಣಕುಡಿ ಸೇರಿದಂತೆ ಶ್ರಾವಕ ಶ್ರಾವಿಕಿಯರು ಇದ್ದರು.
ಬೆಳಗಾವಿ ಎಸ್ ಪಿ ಸಂಜೀವ ಪಾಟೀಲ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ ಸ್ವಾಮೀಜಿ ಪಾರ್ಥಿವ ಶರೀರಕ್ಕೆ ಅಂತಿಮ ಶ್ರದ್ದಾಂಜಲಿ ಸಲ್ಲಿಸಿದರು.

Leave a Reply

error: Content is protected !!