ಇಚ್ಲಂಪಾಡಿ: ಹೊಳೆನೀರಿಗೆ ಕಾಲುಜಾರಿ ಬಿದ್ದು ಕೃಷಿಕ ಕೃಷ್ಣಪ್ಪ ಗೌಡ (ಕಿಟ್ಟಣ್ಣ) ಮೃತ್ಯು

ಶೇರ್ ಮಾಡಿ

ಇಚ್ಲಂಪಾಡಿ: ಹೊಳೆನೀರಿಗೆ ಕಾಲುಜಾರಿ ಬಿದ್ದು ಕೃಷಿಕ ಕೃಷ್ಣಪ್ಪ ಗೌಡ(ಕಿಟ್ಟಣ್ಣ 60ವ.) ಮೃತಪಟ್ಟ ಘಟನೆ ಕಡಬ ಸಮೀಪದ  ಇಚ್ಲಂಪಾಡಿ ಗ್ರಾಮದಲ್ಲಿ ನಡೆದಿದೆ.ಜು.9ರಂದು ಮಧ್ಯಾಹ್ನ ಇಚ್ಲಂಪಾಡಿಯ ಕೊಕ್ಕೊ ಕಾಡಿನ ಹೊಳೆಬದಿಗೆ ಹೋದವರು ಸಂಜೆಯಾದರೂ ಮನೆಗೆ ಬಂದಿರಲಿಲ್ಲ.  ಈ ಹಿನ್ನೆಲೆಯಲ್ಲಿ ಮನೆಯವರು ಹೊಳೆಯಲ್ಲಿ ಹುಡುಕಾಟ ನಡೆಸಿದ್ದ ವೇಳೆ ಅವರ ಚಪ್ಪಲಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ  ಕಳೆದ  ರಾತ್ರಿ  ಹೊಳೆ ಬದಿ ಹುಡುಕಾಟ ನಡೆಸಿದ್ದರೂ ಯಾವುದೇ ಸುಳಿವು ದೊರೆತಿರಲಿಲ್ಲ.ಜು.10ರಂದು ಬೆಳಿಗ್ಗೆ ಹೊಳೆಬದಿ ಮತ್ತೆ ಹುಡುಕಾಟ ನಡೆಸಿದಾಗ  ಕೊಲ್ಯದಕಟ್ಟ ಡಾಮ್ ಪಕ್ಕ ಮೃತದೇಹ ಪತ್ತೆಯಾಗಿದೆ ಎಂದು ವರದಿಯಾಗಿದೆ.ಸ್ಥಳಕ್ಕೆ ಪೊಲೀಸರು ಭೇಟಿ ನೀಡಿರುವುದಾಗಿ ತಿಳಿದು ಬಂದಿದೆ.

Leave a Reply

error: Content is protected !!