ಮೆದುಳು ರಕ್ತಸ್ರಾವದಿಂದ ಉದ್ಯಮಿ ಸಾವು

ಶೇರ್ ಮಾಡಿ

ಬೆಳ್ತಂಗಡಿ: ಮೆದುಳು ರಕ್ತಸ್ರಾವ (ಬ್ರೈನ್‌ ಹ್ಯಾಮರೇಜ್‌) ನಿಂದಾಗಿ ಬೆಳ್ತಂಗಡಿ ಮೂರು ಮಾರ್ಗದ ಬಳಿ ಇರುವ, ಹೊಟೇಲ್‌ ಗಣೇಶ್‌ ಇದರ ಮಾಲಕ ದಿವಾಕರ ಪ್ರಭು(59) ಅವರು ಜು.10ರಂದು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.


ದಿವಾಕರ್‌ ಪ್ರಭು ಅವರು ಜು.5ರಂದು ಮೆದುಳು ರಕ್ತಸ್ರಾವಕ್ಕೆ ಒಳಗಾಗಿದ್ದರು. ತತ್‌ಕ್ಷಣ ಅವರನ್ನು ಪಡೀಲ್‌ನಲ್ಲಿರುವ ಫಸ್ಟ್‌ ನ್ಯೂರೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮೆದುಳಿನಲ್ಲಿ ಗಂಭೀರ ಸ್ವರೂಪದ ಘಾಸಿಯಾಗಿದ್ದರಿಂದ ಕೋಮಾಕ್ಕೆ ಜಾರಿದ್ದರು. ಆ ಬಳಿಕ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿರಿಸಲಾಗಿತ್ತು. ಜು.10ರಂದು ಕೊನೆಯುಸಿರೆಳೆದಿದ್ದಾರೆ.


ದಿವಾಕರ್‌ ಪ್ರಭು ಅವರ ದೊಡ್ಡಪ್ಪ ಎಂ.ಸದಾನಂದ ಪ್ರಭು ಸುಮಾರು 50 ವರ್ಷಗಳ ಹಿಂದೆ 1965-66ರಲ್ಲಿ ಹೊಟೇಲ್‌ ಉದ್ಯಮ ಆರಂಭಿಸಿದ್ದರು. ಅವರ ಬಳಿಕ ದಿವಾಕರ್‌ ಪ್ರಭು ಮುನ್ನಡೆಸುತ್ತಿದ್ದರು. ಮೃತರು ತಾಯಿ, ನಾಲ್ವರು ಸಹೋದರಿಯರು, ಇಬ್ಬರು ಸಹೋದರರನ್ನು ಅಗಲಿದ್ದಾರೆ.

Leave a Reply

error: Content is protected !!