ಶ್ರೀರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘಕ್ಕೆ ಆಯ್ಕೆ

ಶೇರ್ ಮಾಡಿ

ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ 2023-24ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘಕ್ಕೆ ಅಧ್ಯಕ್ಷನಾಗಿ ದ್ವಿತೀಯ ಕಲಾ ವಿಭಾಗದ ರವಿಕುಮಾರ್ ಹಾಗೂ ಕಾರ್ಯದರ್ಶಿಯಾಗಿ ದ್ವಿತೀಯ ವಾಣಿಜ್ಯ ವಿಭಾಗದ ಧನ್ವಿತ್ ಗೌಡ ಆಯ್ಕೆಯಾಗಿರುತ್ತಾರೆ.

ಉಪಾಧ್ಯಕ್ಷರಾಗಿ ಪ್ರಥಮ ವಿಜ್ಞಾನ ವಿಭಾಗದ ಶ್ರೀರಕ್ಷಾ, ಜೊತೆಕಾರ್ಯದರ್ಶಿಯಾಗಿ ಪ್ರಥಮ ವಾಣಿಜ್ಯ ವಿಭಾಗದ ಸತೀಶ್, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ದ್ವಿತೀಯ ವಿಜ್ಞಾನ ವಿಭಾಗದ ತಾನಿಯಾ ಮತ್ತು ದ್ವಿತೀಯ ವಾಣಿಜ್ಯ ವಿಭಾಗದ ವಿಜ್ಞೇಶ್, ಕ್ರೀಡಾ ಕಾರ್ಯದರ್ಶಿಗಳಾಗಿ ದ್ವಿತೀಯ ವಾಣಿಜ್ಯ ವಿಭಾಗದ ಪ್ರೇಕ್ಷ ಮತ್ತು ದ್ವಿತೀಯ ವಾಣಿಜ್ಯ ವಿಭಾಗದ ಹಿತೇಶ್, ಎನ್ಎಸ್ಎಸ್ ನಾಯಕರಾಗಿ ದ್ವಿತೀಯ ವಾಣಿಜ್ಯ ವಿಭಾಗದ ಸಮೀಕ್ಷಾ ಹಾಗೂ ದ್ವಿತೀಯ ಕಲಾವಿಭಾಗದ ಧನರಾಜ್ ಆಯ್ಕೆಯಾಗಿರುತ್ತಾರೆ.

ತರಗತಿ ಪ್ರತಿನಿಧಿಗಳಾಗಿ ಪ್ರಜ್ವಲ್ ಮುತ್ತಪ್ಪ, ಮೋಕ್ಷಿತ್, ಸಾಹಿಲ್, ಶ್ರೇಯಸ್, ಜೀವಿತ್ ಹಿತೇಶ ಯಸ್, ಶ್ರವಣ್, ಜೀವನ್, ಕೌಶಿಕ್, ಭಾರತಿ, ಸಮೀದ, ರಕ್ಷಿತಾ ಶೆಟ್ಟಿ, ಹಂಸಿನಿ, ಭಾಗ್ಯಶ್ರೀ, ಭೂಮಿಕಾ, ಲಾವ್ಯ, ಭೂಮಿಕಾ ಪಿಬಿ ಮತ್ತು ದೇವಿಕಾ ಆಯ್ಕೆಯಾದರು.

ಪ್ರಾಂಶುಪಾಲರಾದ ಚಂದ್ರಶೇಖರ್ ಕೆ ಅವರ ನಿರ್ದೇಶನದಂತೆ ಉಪನ್ಯಾಸಕರಾದ ಗುಡ್ಡಪ್ಪ ಬಲ್ಯ, ಶಿವಪ್ರಸಾದ್ ಹಾಗೂ ಚೇತನ್ ಎಂ ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

Leave a Reply

error: Content is protected !!