7ನೇ ತರಗತಿಯ ಬಾಲಕ ನಿತ್ಯ 15 ಗಂಟೆ ಗೇಮ್: ನಿದ್ದೆಯಲ್ಲೂ ಕಿರುಚಾಟ: ವಿಶೇಷ ಚೇತನರ ಆಸ್ಪತ್ರೆಯಲ್ಲಿ ದಾಖಲು

ಶೇರ್ ಮಾಡಿ

ಇತ್ತೀಚಿನ ಯುವಜನತೆಗೆ ಅನ್ನ, ಆಹಾರ ಇಲ್ಲದಿದ್ರೂ ನಡೆಯುತ್ತದೆ. ಆದರೆ ಪ್ರತಿನಿತ್ಯ ಮೊಬೈಲ್‌ ಇಲ್ಲದಿದ್ರೆ ಏನೂ ನಡೆಯುವುದಿಲ್ಲ. ಮೊಬೈಲ್‌ ಗೀಳಿನಿಂದ ಹತ್ತಾರು ಮಾನಸಿಕ ಕಾಯಿಲೆಗಳು ನಿಧಾನವಾಗಿ ನಮ್ಮನ್ನು ಕುಗ್ಗಿಸುತ್ತಿದೆ ಎನ್ನುವುದು ಗೊತ್ತಿದ್ದರೂ ಕೂಡ ನಾವು ಮೊಬೈಲ್‌ ಬಿಟ್ಟು ಇರುವುದು ತೀರ ಕಡಿಮೆಯೇ.
ರಾಜಸ್ಥಾನದ ಆಳ್ವಾರ್ ನಲ್ಲಿ 15 ವರ್ಷದ ಬಾಲಕನೊಬ್ಬ ಮೊಬೈಲ್‌ ಗೇಮ್ ಆಡಿ ಆಡಿ ಇಂದು ನಿದ್ದೆಯಲ್ಲೂ ಆತನ ಕೈ, ಬಾಯಿ ಗೇಮ್‌ ನ ವಿಧಾನವನ್ನೇ ಅನುಸುತ್ತಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಕಳೆದ 6 ತಿಂಗಳಿನಿಂದ ಬಾಲಕ ದಿನಕ್ಕೆ 15 ಗಂಟೆ ಫ್ರೀ ಫೈಯರ್‌‌ ಹಾಗೂ ಬ್ಯಾಟಲ್‌ ರಾಯಲ್ ಗೇಮ್‌ ನ್ನು ಆಡುತ್ತಿದ್ದ. ಎಲ್ಲಿಯವರೆಗೆ ಅಂದರೆ ಫ್ರೀ ಫೈಯರ್ ಗೇಮ್‌ ಆತನ ಅನ್ನ, ಆಹಾರವನ್ನೇ ಮರೆತು ಬಿಡಿಸಿತ್ತು. 7ನೇ ತರಗತಿಯಲ್ಲಿ ಓದುತ್ತಿರುವ ಬಾಲಕ ಪ್ರತಿನಿತ್ಯ ನಿರಂತರವಾಗಿ ಫ್ರೀ ಫೈಯರ್‌ ಗೇಮ್‌ ಆಡುತ್ತಿದ್ದ ಪರಿಣಾಮ ಆತನ ಮಾನಸಿಕ ಆರೋಗ್ಯ ಹದಗೆಡಲು ಶುರುವಾಗಿದೆ. ನಿದ್ದೆ ಮಾಡಿರುವ ವೇಳೆ ಆತ “ಫೈಯರ್..‌ ಫೈಯರ್.”‌ ಎಂದು ಕಿರುಚಾಡಿ ಆತನ ಕೈಗಳು ಗೇಮ್‌ ನಲ್ಲಿ ಶೂಟ್‌ ಮಾಡುವ ವಿಧಾನವನ್ನೇ ಅನುಸರಿಸಿದೆ. ಎರಡು ತಿಂಗಳು ಪೋಷಕರು ಬಾಲಕನನ್ನು ಮೊಬೈಲ್‌ ನಿಂದ ದೂರವಿಡಲು ಯತ್ನಿಸಿದರೂ, ಬಾಲಕನ ಚಲನವಲನ ಗೇಮ್ ವಿಧಾನವನ್ನೇ ಅನುಸರಿಸಿದೆ. ಇದರಿಂದ ಮತ್ತಷ್ಟು ಗಾಬರಿಗೊಂಡ ಪೋಷಕರು ಆತನನ್ನು ಆಸ್ಪತ್ರೆಯಲ್ಲಿ ತೋರಿಸಿದ್ದಾರೆ.

ಬಾಲಕನನ್ನು ಸದ್ಯ ವಿಶೇಷ ಚೇತನರ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಮನೋವೈದ್ಯರು ಮತ್ತು ವೈದ್ಯರ ತಂಡವು ಪ್ರಸ್ತುತ ಬಾಲಕನ ಆರೋಗ್ಯದ ಮೇಲೆ ನಿಗಾ ಇರಿಸಿದೆ. ಬಾಲಕನ ಆರೋಗ್ಯದಲ್ಲಿ ಕೊಂಚ ಸುಧಾರಣೆ ಕಾಣುತ್ತಿದೆ. ಆದರೆ ಆತನ ಚಲನವಲನದ ಸ್ಥಿತಿ ಹಾಗೆಯೇ ಇದೆ. ನಾನಾ ರೀತಿಯ ಸೆಷನ್ಸ್‌ ಗಳನ್ನು ನಡೆಸಲಾಗುತ್ತಿದೆ ಎಂದು ವರದಿ ತಿಳಿಸಿದೆ.
ಬಾಲಕನ ತಾಯಿ ಮನೆ ಕೆಲಸದವರಾಗಿದ್ದು, ತಂದೆ ರಿಕ್ಷಾ ಚಾಲಕರಾಗಿದ್ದಾರೆ.

Leave a Reply

error: Content is protected !!