ಹಣೆಗೆ ಬಿಂದಿ ಇಟ್ಟು ಶಾಲೆಗೆ ಬಂದ ವಿದ್ಯಾರ್ಥಿನಿಗೆ ಶಿಕ್ಷಕಿಯಿಂದ ಕಪಾಳಮೋಕ್ಷ- ಪ್ರಾಣ ಕಳೆದುಕೊಂಡ ಬಾಲಕಿ

ಶೇರ್ ಮಾಡಿ

ಶಿಕ್ಷಕಿಯೊಬ್ಬರು ಹಣೆಗೆ ಬಿಂದಿ ಇಟ್ಟು ಶಾಲೆಗೆ ಬಂದ ವಿದ್ಯಾರ್ಥಿನಿಯ ಕಪಾಳಕ್ಕೆ ಹೊಡೆದ ಪರಿಣಾಮ ಮನನೊಂದು ವಿದ್ಯಾರ್ಥಿನಿ ಪ್ರಾಣ ಕಳೆದುಕೊಂಡಿರುವ ಘಟನೆ ಜಾರ್ಖಂಡ್‌ ನ ಧನಬಾದ್ ನಲ್ಲಿ ನಡೆದಿರುವುದು ವರದಿಯಾಗಿದೆ.
ಉಷಾ ಕುಮಾರಿ (16) ಮೃತ ಬಾಲಕಿ.
ಉಷಾ ಕುಮಾರಿ ಶಾಲೆಗೆ ತೆರಳುವ ವೇಳೆ ಹಣೆಗೆ ಬಿಂದಿ ಇಟ್ಟು ತೆರಳಿದ್ದಾರೆ. ಇದನ್ನು ಪ್ರಾರ್ಥನೆಯ ವೇಳೆ ಶಿಕ್ಷಕಿಯೊಬ್ಬರು ಗಮನಿಸಿದ್ದಾರೆ. ಇದೇ ಕಾರಣಕ್ಕೆ ಶಿಕ್ಷಕಿ ವಿದ್ಯಾರ್ಥಿನಿಗೆ ಅವಮಾನ ಮಾಡಿ ಕಪಾಳಮೋಕ್ಷ ಮಾಡಿದ್ದಾರೆ.

ಇದರಿಂದ ಮನನೊಂದು ಮನೆಗೆ ಬಂದ ಬಾಲಕಿ ಸೀಲಿಂಗ್ ಫ್ಯಾನ್ ಗೆ ನೇಣುಬಿಗಿದು ಪ್ರಾಣ ಕಳೆದುಕೊಂಡಿದ್ದಾಳೆ. ಈ ಹೆಜ್ಜೆಯನ್ನು ಇಡುವ ಮುನ್ನ ಆಕೆ ಪತ್ರವೊಂದನ್ನು ಬರೆದಿದ್ದು, ಅದರಲ್ಲಿ ಶಿಕ್ಷಕಿ ಹಾಗೂ ಪ್ರಾಂಶುಪಾಲರೇ ನನ್ನ ಸಾವಿಗೆ ಕಾರಣವೆಂದು ಬರೆದಿದ್ದಾರೆ.

ಈ ಸಂಬಂಧ ಮೃತಳ ಕುಟುಂಬಸ್ಥರು ಹಾಗೂ ಸ್ಥಳೀಯರು ಠಾಣೆ ಮುಂದೆ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಕೂಡಲೇ ತೇತುಲ್ಮರಿ ಪೋಲೀಸರು ಸೇಂಟ್ ಕ್ಸೇವಿಯರ್ಸ್ ಶಾಲೆಯ ಶಿಕ್ಷಕಿ ಹಾಗೂ ಪ್ರಾಂಶುಪಾಲರನ್ನು ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ.

Leave a Reply

error: Content is protected !!