ನೇಸರ ಜ13: ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ 44ನೇ ವರ್ಷದ ಮಕರಜ್ಯೋತಿ ಉತ್ಸವ,ಭಜನಾ ಮಹೋತ್ಸವದ ಸಮಾರೋಪ ಸಮಾರಂಭ ದಿನಾಂಕ 14-01-22ನೇ ಶುಕ್ರವಾರ ಪ್ರಾತಃಕಾಲ 6.30 ರಿಂದ ದಿನಾಂಕ 15-01-22ನೇ ಶನಿವಾರ ಪ್ರಾತಃಕಾಲ 6.30 ರವರೆಗೆ ನಡೆಯಲಿದೆ.
ದೇವಳದ ಗೌರವಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಸಂಪುಟ ನರಸಿಂಹ ಮಠ ಸುಬ್ರಹ್ಮಣ್ಯ ಅವರ ಕೃಪಾಶೀರ್ವಾದದೊಂದಿಗೆ, ದೇವಸ್ಥಾನದ ಪ್ರಧಾನ ಅರ್ಚಕರಾದ ಸುರೇಶ್ ಮುಚ್ಚಿಂತಾಯ ಹಾಗೂ ಶ್ರೀಧರ ನೂಜಿನ್ನಾಯರ ನೇತ್ರತ್ವದಲ್ಲಿ ದಿನಾಂಕ 14-01-2022ನೇ ಶುಕ್ರವಾರ ಮಕರ ಸಂಕ್ರಾಂತಿಯ ಧಾರ್ಮಿಕ ಕಾರ್ಯಕ್ರಮಗಳು,ಮಧ್ಯಾಹ್ನ 12 ಗಂಟೆಯಿಂದ ಭರತನಾಟ್ಯ,ವಿದುಷಿ ಶ್ರೀಮತಿ ಸುರೇಖಾ ಹರೀಶ್ ಮತ್ತು ಶಿಷ್ಯವೃಂದ ನೆಲ್ಯಾಡಿ -ಮಂಗಳೂರು ಇವರಿಂದ. ಸಂಜೆ 6.30 ಗಂಟೆಗೆ ನೀಲಾಂಜನ ದೀಪ ದರ್ಶನ ಮೆರವಣಿಗೆ, ರಾತ್ರಿ 08.00 ಗಂಟೆಗೆ ಸಭಾ ಕಾರ್ಯಕ್ರಮ, ಅಧ್ಯಕ್ಷತೆಯನ್ನು ಡಾ.ಸದಾನಂದ ಕುಂದರ್,ಆಧ್ಯಕ್ಷರು ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನ ನೆಲ್ಯಾಡಿ,ಧಾರ್ಮಿಕ ಉಪನ್ಯಾಸ ಶ್ರೀಕೃಷ್ಣ ಉಪಾಧ್ಯಾಯ,ಸಂಪನ್ಮೂಲ ಉಪನ್ಯಾಸಕರು ಅಂಬಿಕಾ ಸಮೂಹ ವಿದ್ಯಾಸಂಸ್ಥೆಗಳು ಪುತ್ತೂರು,ಅತಿಥಿಗಳಾಗಿ ಚೇತನ್ಆನೆಗುಂಡಿ,ಉಪನ್ಯಾಸಕರು ಸಂತ ಜಾರ್ಜ್ ಪದವಿಪೂರ್ವ ಕಾಲೇಜು ನೆಲ್ಯಾಡಿ, ಮನೋಹರ,ಇಲಂತಿಲ ವಕೀಲರು ಬೆಳ್ತಂಗಡಿ ಭಾಗವಹಿಸಲಿದ್ದಾರೆ. ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ. ರಾತ್ರಿ 9:00 ಗಂಟೆಗೆ ಶ್ರೀ ವೀರಭದ್ರಸ್ವಾಮಿ ದಶಾವತಾರ ಯಕ್ಷಗಾನ ಮಂಡಳಿ ಶ್ರೀಕ್ಷೇತ್ರ ಹಿರಿಯಡ್ಕ ಇವರಿಂದ ಕಾಲಮಿತಿ ಯಕ್ಷಗಾನ ಪವಿತ್ರ ಪಲ್ಗುಣಿ ಯಕ್ಷಗಾನ
ದಿನಾಂಕ 15-01-22 ನೇ ಶನಿವಾರ ಬೆಳಗ್ಗೆ ಭಜನಾ ಮಂಗಳೋತ್ಸವ ನಡೆಯಲಿದೆ.