ಶಿಶಿಲ:ಕಾರೆಗುಡ್ಡೆ ಶ್ರೀ ಕೊರಗಜ್ಜ ಕ್ಷೇತ್ರದ ಅಪಪ್ರಚಾರ ಸತ್ಯಕ್ಕೆ ದೂರ

ಶೇರ್ ಮಾಡಿ

ನೇಸರ ಜ.13: ಬೆಳ್ತಂಗಡಿ ಸುಮಾರು 4 ವರ್ಷದಿಂದ ಶಿಶಿಲ ಗ್ರಾಮದ ಕಾರೆಗುಡ್ಡೆ ಎಂಬಲ್ಲಿ ಕೊರಗಜ್ಜನ ಕಟ್ಟೆಯನ್ನು ಜೀಣೋದ್ಧಾರ ಮಾಡಿ ಪೂಜಿಸುತ್ತಾ ಬಂದಿದ್ದು ಇದು ನಮ್ಮ ಪೂರ್ವಜರು ನಂಬಿಕೊಂಡು ಬಂದಿರುವ ದೈವವಾಗಿರುತ್ತದೆ. ಕ್ಷೇತ್ರದಲ್ಲಿ ಪ್ರತೀ ವಾರ ನೂರಾರು ಭಕ್ತರು ಆಗಮಿಸಿ ತಮ್ಮ ಇಷ್ಟಾರ್ಥಗಳನ್ನು ಪ್ರಾರ್ಥಿಸುತ್ತಿದ್ದು ಅವರ ಕಷ್ಟಗಳು ನಿವಾರಣೆಯಾಗುತ್ತಿದ್ದು ಇದರಿಂದ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ.ಇದನ್ನು ನೋಡಲಾರದೆ ಕ್ಷೇತ್ರ ಕಾರ್ಣಿಕದ ಬಗ್ಗೆ ಕೆಲವರು ಅಪಪ್ರಚಾರ ಮಾಡುತ್ತಿದ್ದು ಇದು ಸತ್ಯಕ್ಕೆ ದೂರವಾದ ವಿಷಯವಾಗಿದೆ. ಕ್ಷೇತ್ರಕ್ಕೆ ಬಂದು ಸತ್ಯಾಸತ್ಯತೆ ತಿಳಿಯಲಿ ಎಂದು ಶಿಶಿಲ ಕಾರೆಗುಡ್ಡೆ ಶ್ರೀ ಸ್ವಾಮಿ ಕೊರಗಜ್ಜ ದೈವದ ಪಾತ್ರಿ ಗಣೇಶ ಮುಗೇರ ಹೇಳಿದ್ದಾರೆ.
ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಭಕ್ತರ ಸಂಖ್ಯೆ ಹೆಚ್ಚಾದ ಕಾರಣ ಕ್ಷೇತ್ರವನ್ನು ಜೀಣೋದ್ಧಾರಗೊಳಿಸಿದ್ದು ಭಕ್ತರೇ ಹರಕೆಯನ್ನು ತಂದು ಸಲ್ಲಿಸುತ್ತಿದ್ದು ಅವರ ಸಮ್ಮುಖದಲ್ಲೇ ಅದನ್ನು ಹರಕೆ ಸಲ್ಲಿಸುತ್ತಿದ್ದೇನೆ. ಬಳಿಕ ಒಂದು ದಿನ ಕೊರಗಜ್ಜನ ಶಕ್ತಿಯು ದರ್ಶನದ ರೂಪದಲ್ಲಿ ಬರುತ್ತಿದ್ದು ಇದಕ್ಕೆ ತಂತ್ರಿವರ್ಯರಲ್ಲಿ ಪ್ರಶ್ನಾಚಿಂತನೆ ಇಟ್ಟಾಗ ಇದನ್ನು ಇನ್ನು ಮುಂದೆ ದರ್ಶನದಲ್ಲಿ ನಿಂತು ನಂಬಿ ಬಂದ ಜನರಿಗೆ ನುಡಿ ಕೊಡಬೇಕು ಎಂದು ಹೇಳಿದ ಪ್ರಕಾರ ಕೊರಗಜ್ಜನ ದರ್ಶನ ಮಾಡುತ್ತಾ ಬಂದಿದ್ದು. ನಂತರ ಭಕ್ತರ ಸಂಖ್ಯೆ ಹೆಚ್ಚಾದಾಗ ಸ್ಥಳೀಯರಾದ ಸಂದೀಪ್ ಗೌಡ ಎಂಬವರಲ್ಲಿ ನಾನೇ ಕ್ಷೇತ್ರದಲ್ಲಿ ನಿಂತು ಸಹಾಯ ಮಾಡುವಂತೆ ವಿನಂತಿಸಿದ್ದೇನೆ ಅದಕ್ಕೆ ಅವರು ಮತ್ತು ಸ್ಥಳೀಯ ಸುಮಾರು 15 ಜನ ಈ ಕ್ಷೇತ್ರದಲ್ಲಿ ಉಚಿತವಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದು. ಪ್ರತೀವಾರ ಭಕ್ತರಿಗೆ ಅನ್ನಸಂತರ್ಪಣೆ, ಸಂಕ್ರಾಂತಿ ದಿನದಂತೆ ವಿಶೇಷ ಪೂಜೆ, ಅನ್ನಸಂತರ್ಪಣೆ ಮಾಡುತ್ತಾ ಬಂದಿದ್ದು ಇದೆಲ್ಲವನ್ನು ಭಕ್ತರೇ ಮುಂದೆ ನಿಂತು ಮಾಡುತ್ತಾರೆ ಎಂದರು.
ಶಿಶಿಲ ಗ್ರಾ.ಪಂ ಅಧ್ಯಕ್ಷ ಸಂದೀಪ್ ಗೌಡ ಮಾತನಾಡಿ ಕೊರಗಜ್ಜ ದೈವದ ಆರಾಧಕ ಗಣೇಶ ಮುಗೇರ ಎಂಬವರ ಕೋರಿಕೆಯಂತೆ ಕೊರಗಜ್ಜ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದು ಹಿಂದಿನಿಂದಲೂ ನಾವು ಕೊರಗಜ್ಜನ ಭಕ್ತರಾಗಿದ್ದೇವೆ, ಇದೀಗ ಕ್ಷೇತ್ರದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುವುದರ ಜೊತೆಗೆ ಕ್ಷೇತ್ರವನ್ನು ಅಭಿವೃದ್ಧಿ ಮಾಡುತ್ತೇವೆ. ಇದರಿಂದ ರಾಜಕೀಯದಲ್ಲಿ ಬೆಳೆಯುತ್ತೇವೆ ಎಂದು ಸಹಿಸಲಾಗದವರು ಅಪಪ್ರಚಾರ ಮಾಡಲು ಹೊರಟ್ಟಿದ್ದು ಇದಕ್ಕಾಗಿ ಜ.14ರಂದು ಕ್ಷೇತ್ರದ ಭಕ್ತರು ಸೇರಿ ಶ್ರೀ ಶಿಶಿಲೇಶ್ವರ ದೇವಸ್ಥಾನದಿಂದ ಶ್ರೀ ಕಾರೆಗುಡ್ಡೆ ಕೊರಗಜ್ಜನ ಕ್ಷೇತ್ರಕ್ಕೆ ಪಾದಯಾತ್ರೆ ನಡೆಸಿ ಸುಳ್ಳು ಅಪಪ್ರಚಾರ ಮಾಡುವವರಿಗೆ ಶ್ರೀಕ್ಷೇತ್ರದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಲಿದ್ದು, ಇದಕ್ಕೆ ವಿಶ್ವ ಹಿಂದೂ ಪರಿಷತ್, ಭಜರಂಗದಳ,ವಿವಿಧ ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿದ್ದಾರೆ ಎಂದರು.
ಕರುಣಾಕರ್ ಶಿಶಿಲ ಮಾತನಾಡಿ ಶಿಶಿಲ ಗ್ರಾಮದಲ್ಲಿ ಎಲ್ಲಾ ಸಮಾಜ ಬಾಂಧವರು ಸೇರಿ ಆರಾಧಿಸುವ ಕ್ಷೇತ್ರವಾಗಿದ್ದು.ಕಳೆದ ಎರಡು ವರ್ಷಗಳಿಂದ ಅತೀ ಹೆಚ್ಚು ಭಕ್ತರು ಬರುವ ಕ್ಷೇತ್ರವಾಗಿದೆ ಆದರೆ ಇದುವರೆಗೆ ಯಾವುದೇ ಆರೋಪಗಳು ಬಂದಿರುವುದಿಲ್ಲ. ಕ್ಷೇತ್ರದ ಬೆಳವಣಿಗೆಯನ್ನು ಸಹಿಸದೆ ಕೆಲವರು ಅಪಪ್ರಚಾರವನ್ನು ಮಾಡುತ್ತಿದ್ದು ಇದನ್ನುಖಂಡಿಸುತ್ತೇವೆ.ಮುಂದಿನ ದಿನಗಳಲ್ಲಿ ಭಕ್ತರ ಅಪೇಕ್ಷೆಯಂತೆ ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲಾಗುವುದು ಎಂದರು. ಗೋಷ್ಠಿಯಲ್ಲಿ ವಿಶ್ವನಾಥ ಗುಳಿಗ ದೈವದ ಪಾತ್ರಿ, ಮಾಧವ, ಶಿನಪ್ಪ ಗೌಡ, ಉಪಸ್ಥಿತರಿದ್ದರು.

Leave a Reply

error: Content is protected !!