ಪೋಷಕರೇ ಎಚ್ಚರ; ಮಕ್ಕಳಲ್ಲಿ ಹೆಚ್ಚುತ್ತಿರುವ Online Game ಚಟ… ವೈದ್ಯರ ಸಲಹೆ ಏನು?

ಶೇರ್ ಮಾಡಿ

ಅತಿಯಾದ ಆನ್‌ ಲೈನ್‌ ಗೇಮ್‌ ಚಟದಿಂದಾಗಿ ಬಾಲಕನೊಬ್ಬ ಜ್ಞಾಪಕಶಕ್ತಿ ಕಳೆದುಕೊಂಡಿರುವ ಘಟನೆ ರಾಜಸ್ಥಾನದ ಅಲ್ವಾರ್‌ ನಲ್ಲಿ ನಡೆದಿದ್ದು, ಇತ್ತೀಚೆಗೆ ಮಕ್ಕಳು ಆನ್‌ ಲೈನ್‌ ಗೇಮ್‌ ನತ್ತ ಹೆಚ್ಚು ಆಕರ್ಷಿತರಾಗುತ್ತಿರುವುದು ಕಳವಳಕಾರಿಯಾಗಿ ಪರಿಣಮಿಸಿದೆ ಎಂದು ವರದಿ ತಿಳಿಸಿದೆ.
ಈ ಬಾಲಕ PUBG ಮತ್ತು ಫ್ರೀ ಫೈಯರ್‌ ನಂತಹ ಆನ್‌ ಲೈನ್‌ ಗೇಮ್‌ ಗಳ ವ್ಯಸನಿಯಾಗಿದ್ದು, ಇದರ ಪರಿಣಾಮ ಈತ ಮಾನಸಿಕ ಸಮತೋಲನ ಕಳೆದುಕೊಂಡಿದ್ದು, ಜ್ಞಾಪಕಶಕ್ತಿಗೂ ಹೊಡೆತ ಬಿದ್ದಿದೆ. ಬಾಲಕನನ್ನು ರಾಜಸ್ಥಾನದ ವಿಶೇಷ ಶಾಲೆಗೆ ದಾಖಲಿಸಲಾಗಿದ್ದು, ಅಲ್ಲಿ ಆತನ ಸ್ಥಿತಿಗತಿಯನ್ನು ಪರಿಶೀಲಿಸುತ್ತಿರುವುದಾಗಿ ವರದಿ ವಿವರಿಸಿದೆ.
ಬಾಲಕ ಪೋಷಕರ ಗಮನಕ್ಕೆ ಬಾರದಂತೆ ನೆರೆಹೊರೆಯವರ ವೈ-ಫೈ ಕನೆಕ್ಷನ್‌ ಉಪಯೋಗಿಸಿಕೊಂಡು ಆನ್‌ ಲೈನ್‌ ಗೇಮ್‌ ಗಳನ್ನು ಆಡುತ್ತಿದ್ದ. ಒಂದು ಗೇಮ್ಸ್‌ ನಲ್ಲಿ ಬಾಲಕ ಸೋತ ಕಾರಣ ಅದು ಆತನ ಮೇಲೆ ಗಂಭೀರ ಪರಿಣಾಮ ಬೀರಿ ಮಾನಸಿಕ ಸಮತೋಲನ ಕಳೆದುಕೊಳ್ಳುವಂತೆ ಮಾಡುತ್ತದೆ.

ಬಾಲಕನ ಫೈಯರ್‌ ಗೇಮ್ಸ್‌ ಅನ್ನು ಹೆಚ್ಚು ಆಡುತ್ತಿದ್ದ ಪರಿಣಾಮ, ಆತ ಗೇಮ್‌ ನಲ್ಲಿ ಸೋತಿದ್ದ. ಒಂದು ವೇಳೆ ಇಂತಹ ಗೇಮ್‌ ನಲ್ಲಿ ಆಟಗಾರ ಸೋತರೆ ಅವರು ಅದನ್ನು ಸಹಿಸಿಕೊಳ್ಳುವುದಿಲ್ಲ. ಒಂದೊ ಅವರು ಆತ್ಮಹತ್ಯೆಗೆ ಶರಣಾಗುತ್ತಾರೆ, ಇಲ್ಲವೇ ಮಾನಸಿಕ ಸಮತೋಲನ ಕಳೆದುಕೊಳ್ಳುತ್ತಾರೆ.

ಇತ್ತೀಚೆಗಿನ ವರ್ಷಗಳಲ್ಲಿ ಮಕ್ಕಳು ಅತೀಯಾಗಿ ಆನ್‌ ಲೈನ್‌ ಗೇಮ್‌ ಗಳ ಚಟಕ್ಕೆ ಬಲಿಯಾಗುತ್ತಿರುವುದು ಹೆಚ್ಚಳವಾಗುತ್ತಿದೆ. ಇದರಿಂದಾಗಿ ಹೃದಯಾಘಾತ ಸಂಭವಿಸಬಹುದು, ಅಷ್ಟೇ ಅಲ್ಲ ಮಾನಸಿಕ ಒತ್ತಡ, ಖಿನ್ನತೆ ಸೇರಿದಂತೆ ಹಲವು ರೀತಿಯ ಮಾನಸಿಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಎಂದು ತಜ್ಞ ವೈದ್ಯರು ಅಭಿಪ್ರಾಯ .

ಪೋಷಕರ ಪಾತ್ರ ಮಹತ್ವ:
ಆನ್‌ ಲೈನ್‌ ಗೇಮ್‌ ವ್ಯಸನ ಗುಣಪಡಿಸಲು ಯಾವುದೇ ವೈದ್ಯಕೀಯ ಔಷಧಗಳಿಲ್ಲ. ಆನ್‌ ಲೈನ್‌ ಗೇಮ್‌ ಗಳನ್ನು ಅತಿಯಾಗಿ ಬಳಸುವುದರಿಂದ ಇದು ಮೆದುಳಿನಲ್ಲಿರುವ ಸಿರೊಟೋನಿನ್‌ ಮತ್ತು ಡೋಪಮೈನ್‌ ಸಮತೋಲನಕ್ಕೆ ಅಡ್ಡಿ ಉಂಟು ಮಾಡುತ್ತದೆ. ಇದರ ಪರಿಣಾಮ ಮಕ್ಕಳ ನಡವಳಿಕೆಯಲ್ಲಿ ಬದಲಾವಣೆಯಾಗುತ್ತದೆ. ಮಾನಸಿಕ ಒತ್ತಡ, ಖಿನ್ನತೆಗೆ ಚಿಕಿತ್ಸೆ ನೀಡಬಹುದಾಗಿದೆ. ಆದರೆ ಆನ್‌ ಲೈನ್‌ ಗೇಮ್‌ ಗಳ ಚಟವನ್ನು ಬಿಡಿಸುವುದು ಕಷ್ಟ. ಈ ನಿಟ್ಟಿನಲ್ಲಿ ಪೋಷಕರ ಪಾತ್ರ ಮಹತ್ತರವಾದದ್ದು. ಇಂತಹ ಗೇಮ್‌ ಗಳತ್ತ ಮಕ್ಕಳು ಆಕರ್ಷಿತರಾಗದಂತೆ ನೋಡಿಕೊಳ್ಳಬೇಕು. ಮಕ್ಕಳ ಮೇಲೆ ಸದಾ ನಿಗಾ ವಹಿಸುತ್ತಿರಬೇಕು. ಆನ್‌ ಲೈನ್‌ ಗೇಮ್‌ ಗಳ ದುಷ್ಪರಿಣಾಮದ ಬಗ್ಗೆ ತಿಳಿವಳಿಕೆ ಮೂಡಿಸಬೇಕು.

Leave a Reply

error: Content is protected !!