ನೆಲ್ಯಾಡಿ ಶ್ರೀರಾಮ ವಿದ್ಯಾಲಯ ಸೂರ್ಯನಗರ ವಿವೇಕ ಸಂಜೀವಿನಿ ಕಾರ್ಯಕ್ರಮ

ಶೇರ್ ಮಾಡಿ

ನೆಲ್ಯಾಡಿ: ಶ್ರೀ ರಾಮ ವಿದ್ಯಾಲಯ ಮತ್ತು ಶ್ರೀರಾಮ ಗ್ರಾಮ ವಿಕಾಸ ಸಮಿತಿ ನೆಲ್ಯಾಡಿ ಇದರ ವತಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ನೆಲ್ಯಾಡಿ ಹಾಗು ಅರಕ್ಷಕ ಹೊರ ಠಾಣೆ ಶಿರಾಡಿ ಇವರ ಸಹಯೋಗದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಆಶಯದಂತೆ ವಿವೇಕ ಸಂಜೀವಿನಿ ಕಾರ್ಯಕ್ರಮವನ್ನು ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಶಿರಾಡಿ ಹೊರ ಠಾಣೆ ನೆಲ್ಯಾಡಿ ಇಲ್ಲಿ ಜು.13ರಂದು ನಡೆಯಿತು.

ಕಾರ್ಯಕ್ರಮದಲ್ಲಿ ಆರೋಗ್ಯ ಕೇಂದ್ರದ ಡಾ.ಶಿಶಿರ, ಆರಕ್ಷಕ ಠಾಣಾಧಿಕಾರಿಗಳಾದ ಕುಶಾಲಪ್ಪ ಮತ್ತು ಅರಣ್ಯ ಇಲಾಖೆಯ ಅಧಿಕಾರಿ ದೇವಿಪ್ರಸಾದ್ ಅಥಿತಿಗಳಾಗಿದ್ದರು. ಕಾರ್ಯಕ್ರಮದಲ್ಲಿ ಸುಮಾರು 40 ವರುಷಗಳಿಂದ ನಾಟಿ ವೈದ್ಯೆ ಶ್ರೀಮತಿ ಹೇಮಾವತಿ ಶೆಟ್ಟಿ ಬಲ್ಯ ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಆರಕ್ಷಕ ಠಾಣೆಯ ಆವರಣದಲ್ಲಿ ಔಷಧಿಯ ಸಸಿಗಳನ್ನು ನೆಡಲಾಯಿತು.
ಕಾರ್ಯಕ್ರಮದಲ್ಲಿ ಶ್ರೀರಾಮ ವಿದ್ಯಾಲಯದ ಕಾರ್ಯದರ್ಶಿಗಳಾದ ಮೂಲಚಂದ್ರ ಕಾಂಚನ, ನೆಲ್ಯಾಡಿ ಗ್ರಾಮ ಪಂಚಾಯತ್ ಸದಸ್ಯರಾದ ರವಿಪ್ರಸಾದ್ ಶೆಟ್ಟಿ ಬಲ್ಯ, ಶ್ರೀರಾಮ ಗ್ರಾಮ ವಿಕಾಸದ ಅಧ್ಯಕ್ಷರಾದ ಗಂಗಾಧರ ಶೆಟ್ಟಿ ಕೊಲ್ಯೊಟ್ಟು, ಗ್ರಾಮ ವಿಕಾಸ ಸಮಿತಿಯ ಕಾರ್ಯದರ್ಶಿಯಾದ ಲೋಕೇಶ್ ಕೊಲ್ಯೊಟ್ಟು ಮತ್ತು ಗ್ರಾಮ ವಿಕಾಸದ ಸದಸ್ಯರು, ಶ್ರೀರಾಮ ವಿದ್ಯಾಲಯದ ಮುಖ್ಯ ಗುರುಗಳಾದ ಗಣೇಶ್ ವಾಗ್ಲೆ, ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕ ಅನಿಲ್ ಅಕ್ಕಪ್ಪಾಡಿ ಕಾರ್ಯಕ್ರಮ ಸಂಘಟಿಸಿದರು.
ಔಷಧಿ ವನದ ಸಂರಕ್ಷಣೆ ಜವಾಬ್ದಾರಿಯನ್ನು ಗ್ರಾಮ ವಿಕಾಸದ ಸದಸ್ಯರು ವಹಿಸಿಕೊಂಡರು.

Leave a Reply

error: Content is protected !!