ಸಹೋದರರ ನಡುವೆ ಭೂ ವಿವಾದ, ಗಲಾಟೆ; ತಮ್ಮನಿಂದ ಅಣ್ಣನ ಕೊಲೆ

ಶೇರ್ ಮಾಡಿ

ಅರಂತೋಡು: ತಮ್ಮನಿಂದ ಅಣ್ಣ ಕೊಲೆಯಾದ ಘಟನೆ ಚೆಂಬು ಗ್ರಾಮದ ಕುದ್ರೆಪಾಯದಲ್ಲಿ ಜು.14ರ ಶುಕ್ರವಾರ ವರದಿಯಾಗಿದೆ.
ಸತ್ತಾರ್, ರಫೀಕ್, ಉಸ್ಮಾನ್ ಮೊದಲಾದ ಅಣ್ಣತಮ್ಮಂದಿರ ಕೃಷಿ ಭೂಮಿ ಕುದ್ರೆಪಾಯದಲ್ಲಿದ್ದು, ಜಾಗದ ತಕರಾರಿನಿಂದಾಗಿ ವಿವಾದವೆದ್ದಿದ್ದು, ಸಹೋದರರು ಸೇರಿ ಉಸ್ಮಾನ್ ಎಂಬವರನ್ನು ಚೂರಿಯಿಂದ ಇರಿದು ಕೊಂದಿರುವುದಾಗಿ ಮಾಹಿತಿ ಲಭಿಸಿದೆ.
ಸಂಪಾಜೆ ಪೋಲೀಸರು ಸ್ಥಳಕ್ಕೆ ಧಾವಿಸಿದ್ದು, ಹೆಚ್ಚಿನ ವಿವರ ಇನ್ನಷ್ಟೆ ಲಭಿಸಬೇಕಾಗಿದೆ.

Leave a Reply

error: Content is protected !!