ಉಜಿರೆ ಶ್ರೀ ಧ.ಮಂ.ಪ.ಪೂ ಕಾಲೇಜು: ಸ್ಮರಣ ಕೌಶಲ್ಯ ತರಬೇತಿ

ಶೇರ್ ಮಾಡಿ

ಉಜಿರೆ: ಮನುಷ್ಯನ ಜೀವನಕ್ಕೆ ವಿದ್ಯೆ, ಸಂಸ್ಕಾರ ಹಾಗೂ ಕೌಶಲ್ಯ ಅತಿ ಮುಖ್ಯ. ಒಂದಾದರೂ ಕೌಶಲ್ಯ ಇದ್ದರೆ ಜೀವನ ಸುಖಕರ ಆಗಿರುತ್ತದೆ. ಸಮಾಜದಲ್ಲಿ ಮಾತ್ರವಲ್ಲದೆ ಇತರ ಕಡೆ ಗುರುತಿಸಿಕೊಳ್ಳಲು ಇದರಿಂದ ಸಾಧ್ಯ. ಸ್ಮರಣ ಕೌಶಲ್ಯಕ್ಕೆ ಏಕಾಗ್ರತೆ ಹಾಗೂ ತೊಡಗಿಸಿಕೊಳ್ಳುವುದು ಮುಖ್ಯ. ಇದರೊಂದಿಗೆ ಮನಸ್ಸನ್ನು ಕೇಂದ್ರೀಕರಿಸಿಕೊಂಡರೆ ಅದ್ಭುತ ಸಾಧನೆ ನಮ್ಮಿಂದ ಸಾಧ್ಯ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಕನ್ನಡ ಭಾಷಾ ಉಪನ್ಯಾಸಕ ಮಹಾವೀರ ಜೈನ್ ಹೇಳಿದರು.
ಇವರು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ನಡೆದ ವಿಶ್ವ ಯುವ ಕೌಶಲ್ಯ ದಿನದ ಅಂಗವಾಗಿ ನಡೆದ ‘ಸ್ಮರಣ ಶಕ್ತಿಗೊಂದು ಮೀಟುಗೋಲು ‘ ಎನ್ನುವ ವಿಶೇಷ ಸ್ಮರಣಶಕ್ತಿ ಕೌಶಲ್ಯ ತರಬೇತಿ ನೀಡುತ್ತಾ ಮಾತನಾಡಿದರು.

ಈ ಸಂದರ್ಭದಲ್ಲಿ ಸ್ಮರಣಶಕ್ತಿಯ ಪ್ರಾತ್ಯಕ್ಷಿಕೆಯನ್ನೂ ನಡೆಸಿದರು.
ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್, ಸಹ ಯೋಜನಾಧಿಕಾರಿ ಪದ್ಮಶ್ರೀ ರಕ್ಷಿತ್, ನಾಯಕರಾದ ಸುದರ್ಶನ ನಾಯಕ್ ಹಾಗೂ ದಕ್ಷಾ ಉಪಸ್ಥಿತರಿದ್ದರು.
ನಿರಂತ್ ಜೈನ್ ಸ್ವಾಗತಿಸಿದರು. ಕಿಶೋರ್ ಪಾಟೀಲ್ ವಂದಿಸಿದರು. ದುತಿಯಾ ನಿರೂಪಿಸಿದರು.

Leave a Reply

error: Content is protected !!